ಬಜ್ಪೆ -ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ,ವ್ಯಕ್ತಿಯ ಬಂಧನ
ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಕರೆ ಮಾಡಿ ಆತಂಕಕ್ಕೆ ಒಳಗಾಗುವಂತೆ ಮಾಡಿದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯನ್ನ ಮಾನಸಿಕ ಅಸ್ವಸ್ಥ ಎಂಬ ಮಾಹಿತಿ ಲಭಿಸಿದೆ.
ಬಂಧಿತನನ್ನ ಕಾರ್ಕಳದ ಮುದ್ರಾಡಿ ಗ್ರಾಮದ ಬಲ್ಲಾಡಿ ತುಂಡುಗುಡ್ಡೆಯ ವಸಂತ(33) ಎಂದು ಗುರುತಿಸಲಾಗಿದೆ. ಹೋಟೆಲ್ ಕಾರ್ಮಿಕನಾಗಿರುವ ಈತ ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾನೆ. ಆ ವೇಳೆಯೇ ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣ ಬಜ್ಪೆ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ವಸಂತನನ್ನ ಕಾರ್ಕಳ ಮುದ್ರಾಡಿಯ ಮನೆಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಹೆಬ್ರಿ, ಬಜ್ಪೆ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.
ಮಾನಸಿಕ ಅಸ್ವಸ್ಥನಿಗೆ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬೆದರಿಕೆ ಹಾಕಲು ಗೊತ್ತಿದೆ. ಇಲ್ಲಿ ಮಾನಸಿಕ ಅಸ್ವಸ್ಥ ಅವನೋ ಇಲ್ಲ ಅದನ್ನು ಹೇಳಿದವರೋ ಎಂಬ ಶಂಕೆ ಇದೆ.