ಮಕ್ಕಳಿಗೆ ಮನೆಯಲ್ಲೇ ಪಾಠ: ಮುದ್ರಾಡಿ ಶಾಲೆಯಲ್ಲಿ ಹೀಗೊಂದು ವಿಭಿನ್ನ ಪ್ರಯೋಗ

ಉಡುಪಿ (ಉಡುಪಿ ಟೈಮ್ಸ್ ವರದಿ ): ಮನೆಯೇ ಮೊದಲ ಪಾಠ ಶಾಲೆ ಎಂಬ ಗಾದೆ ಮಾತಿನಂತೆ , ಕೊರೋನಾ ಸಮಸ್ಯೆ ಸಂದರ್ಭದಲ್ಲಿ ಮಕ್ಕಳಿಗೆ ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಆದರೆ ಮಕ್ಕಳ ವಿದ್ಯೆಗೆ ಸಮಸ್ಯೆ ಬಾರದಿರಲಿ ಎಂಬ ನಿಟ್ಟಿನಲ್ಲಿ ಹೆಬ್ರಿ ಸಮೀಪದ ಶಾಲೆಯೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಮಕ್ಕಳನ್ನು ಕಲಿಕೆಯ ಕಡೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 6-7 ಮಕ್ಕಳನ್ನು ಒಂದಡೆ ಸೇರಿಸಿ ಅಭ್ಯಾಸದ ಪುನ:ಮನನ ಕಾರ್ಯವನ್ನು ನಡೆಸುತ್ತಿದ್ದಾರೆ.


ಹೆಬ್ರಿ ಸಮೀಪದ ಮುದ್ರಾಡಿ ನೆಲ್ಲಿಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಹೆಗ್ಡೆ ಮತ್ತು ಸಹ ಶಿಕ್ಷಕರು ವಿದ್ಯಾರ್ಥಿಗಳ ಮನೆಯಲ್ಲೇ ಪಾಠ ಮಾಡುವ ವಿಭಿನ್ನ ಕಾರ್ಯಕ್ಕೆ ಮುಂದಾದವರು.


ಕೊರೊನಾ ಜಾಗೃತಿಯ ನಿಯಮವನ್ನು ಪಾಲಿಸಿಕೊಂಡು ಮಕ್ಕಳ ಆರೋಗ್ಯವನ್ನು ದೃಷ್ಠಿಯಲ್ಲಿಕೊಂಡೇ ತರಗತಿಯನ್ನು ನಿರ್ವಹಿಸಲಾಗುತ್ತಿದ್ದೆ ನೆಲ್ಲಿಕಟ್ಟೆ ಶಾಲೆಯ ವ್ಯಾಪ್ತಿಯಲ್ಲಿ 4 ಸ್ಥಳಗಳನ್ನು ಗುರುತಿಸಿ ಆಯಾಯ ಪರಿಸರದ ಮಕ್ಕಳಿಗೆ ಅಲ್ಲಿರುವ ಶಿಕ್ಷಕರ ಮನೆಯಲ್ಲಿ ಪಾಠ ಮಾಡಲಾಗುತ್ತಿದ್ದೆ. ತರಗತಿಗೆ ಹಾಜರಾಗಲು ಸಮಸ್ಯೆಯಿರುವ ಮಕ್ಕಳಿಗೆ ವಾರದಲ್ಲಿ ಎರಡು ದಿನ ಅವರ ಮನೆಗೆ ತೆರಳಿ ತರಗತಿ ಮಾಡಿ ಮಕ್ಕಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತಿದೆ ಇದಕ್ಕೆ ಸಹ ಶಿಕ್ಷಕರಾದ ಲತಾ ಹೆಗ್ಡೆ, ಗೌರವ ಶಿಕ್ಷಕಿಯರಾದ ಚೈತ್ರ, ನಂದಿನಿ ಕೈ ಜೋಡಿಸಿದ್ದು ಮಾತ್ರವಲ್ಲದೆ ಪೋಷಕರು ಸಹಕಾರ ನೀಡಿದ್ದಾರೆ ಎಂಬುದಾಗಿ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!