ಪ್ರಧಾನಿ ಭಾಷಣ ಹೈ ಲೈಟ್ಸ್: 4.0ಲಾಕ್ ಡೌನ್ ಫಿಕ್ಸ್!
ನವದೆಹಲಿ: ಆಯಾಯ ರಾಜ್ಯಗಳ ಸಲಹೆಯ ಮೇರೆಗೆ ಮೇ 18 ರ ನಂತರ ಹೊಸ ರೂಪದ ಲಾಕ್ ಡೌನ್ ಜಾರಿಯಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ 2020ಕ್ಕೆ 20 ಲಕ್ಷ ಕೋಟಿ ಪ್ಯಾಕೆಜ್ ನ್ನು ಮೋದಿ ಘೋಷಿಸಿದ್ದಾರೆ. ದೇಶದ ಜಿಡಿಪಿಯ ಶೇ.10 ರಷ್ಟು ಅಂದರೆ 20 ಲಕ್ಷ ಕೋಟಿ ಅನುದಾನ ಇದಾಗಿದೆ ಎಂದರು.
ದೇಶದ ಶ್ರಮಿಕರು, ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರಿಗಾಗಿ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಲಿದೆ. ಆರ್ಥಿಕತೆ, ಮೂಲಸೌಕರ್ಯ, ನಮ್ಮ ವ್ಯವಸ್ಥೆ, ತಂತ್ರಜ್ಞಾನ ಮತ್ತು ಜನಸಂಖ್ಯೆ ಆಧಾರಿತ ಬೇಡಿಕೆಯೇ ಭಾರತದ ಪಂಚಸ್ತಂಭಗಳಾಗಿವೆ ಎಂದರು. ಟಿಬಿ, ಪೋಲಿಯೋ ಅಪೌಷ್ಟಿಕತೆ ನಿರ್ಮೂಲನೆಯಾಗಿದೆ.
ಜೀವನ್ಮರಣ ಹೋರಾಟ ನಡೆಸುತ್ತಿರುವವರಿಗೆ ಭಾರತ ಔಷಧಿ ಒದಗಿಸಿದೆ. ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ ಹಾಗು ಸ್ಥಳೀಯ ಮಾರುಕಟ್ಟೆಗೆ ಬೆಂಬಲ ನೀಡುವಂತೆ ಪ್ರಧಾನಿ ಸೂಚಿಸಿದರು. ವಿಶ್ವದ ಆರ್ಥಿಕ ಸ್ಥಿತಿಯು ನಮಗೊಂದು ಪಾಠವನ್ನು ಹೇಳಿಕೊಡುತ್ತಿದೆ.
ಕೊರೊನಾ ವೈರಸ್ ಸೋಂಕು ಮೊದಲು ಕಾಣಿಸಿಕೊಂಡಿದ್ದಾಗ ಭಾರತದಲ್ಲಿ ಎನ್-95 ಮಾಸ್ಕ್ ಗಳಿಗೆ ಬೇಡಿಕೆ ಹೆಚ್ಚಾಯಿತು.ಭಾರತದಲ್ಲಿ ಇಂದು ಪ್ರತಿನಿತ್ಯ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್-95 ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದೆ. ಸಕಾರಾತ್ಮಕವಾಗಿ ಹೋರಾಡಿದ್ದಲ್ಲಿ ಮಾತ್ರ ಕೊರೊನಾ ವೈರಸ್ ವಿರುದ್ಧ ಜಯ ಗಳಿಸಲು ಸಾಧ್ಯವಾಗುತ್ತದೆ. ಎಂಬುದಾಗಿ ತಿಳಿಸಿದರು. ನಾವು ಕೊರೋನಾ ಜೊತೆಯೇ ಜೀವಿಸುವುದನ್ನು ಕಲಿಯಬೇಕು, ಕೊರೋನಾ ಸವಾಲನ್ನು ನಾವು ಭಾರತವನ್ನು ಹೊಸ ಮನ್ವಂತರದೆಡೆಗೆ ಕರೆದೊಯ್ಯಲು ಬಳಸಿಕೊಳ್ಳಬೇಕು. ಮೇ.18 ರ ನಂತರ ಲಾಕ್ ಡೌನ್ ಹೊಸ ಸ್ವರೂಪದಲ್ಲಿ ಹೊಸ ಮಾರ್ಗಸೂಚಿಗಳೊಂದಿಗೆ ಬರಲಿದೆ. ರಾಜ್ಯಗಳ ಜೊತೆ ಚರ್ಚಿಸಿ ಮಾರ್ಗಸೂಚಿಗಳನ್ನು ಘೋಷಿಸಲಾಗುವುದು ಎಂದು ಮೋದಿ ಇದೇ ವೇಳೆ ತಿಳಿಸಿದ್ದಾರೆ.