ಉಡುಪಿ: ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಶೋ ರೂಮ್ ಉದ್ಘಾಟನೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಪರಿಸರ ಸ್ನೇಹಿ ಈ ದ್ವಿಚಕ್ರ ವಾಹನದಿಂದಾಗಿ ಅನೇಕ ಉಪಯೋಗಗಳಿವೆ, ಈ ಸಂಸ್ಥೆಯಿಂದ ಪರಿಸರ ಸ್ನೇಹಿ ಕಾರು , ರಿಕ್ಷಾ ಬರುವಂತಾಗಲಿ, ಇದು ದೇಶದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಶುಭ ಹಾರೈಸಿದರು.
ಉಡುಪಿಯ ಕರಾವಳಿ ಜಂಕ್ಷನ್ ನ ಕಾರ್ತಿಕ್ ಟ್ರೇಡ್ ಸೆಂಟರ್ ನಲ್ಲಿ ಶ್ರೀ ಮಹಾಮಾಯ ಎಂಟರ್ಪ್ರೈಸಸ್ ದ್ವಿಚಕ್ರ ವಾಹನದ ಶೋ ರೂಮ್ ನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು, ಅವರು ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಯಶಸ್ವಿಯಾಗಿರುವ ಈ ಸ್ಕೂಟರ್ ಉಡುಪಿ ಜನರಿಗೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯ ಪ್ರಯುಕ್ತ ಮುಗಂಡ ಬುಕ್ಕಿಂಗ್ ನ ವಿಶೇಷ ರಿಯಾಯಿತಿಯೊಂದಿಗೆ ಕ್ಯಾಶ್ ಬ್ಯಾಕ್ ಆಫರ್ ಲಭ್ಯವಿದೆ ಎಂದು ಸಂಸ್ಥೆಯ ಆಡಳಿತ ಅಧಿಕಾರಿ ನವೀನ್ ಎನ್ .ಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಇ- ಕಾರ್ಬನ್ ನ್ಯೂಟ್ರಾಲಜಿ ಸುರತ್ಕಲ್ ಡೀಲರ್ ಸುರೇಶ ಶೆಟ್ಟಿ , ಇ- ಕಾರ್ಬನ್ ನ್ಯೂಟ್ರಾಲಜಿ ಪ್ರಮೋಟರ್ ಸುಹಾಸ್ ರಾವ್, ಕಟ್ಟಡ ಮಾಲಕ ವಿಶ್ವನಾಥ ಕುಂದರ್ , ಸತೀಶ್ ಶೆಟ್ಟಿ, ಸಂಸ್ಥೆಯ ನಿರ್ದೇಶಕ ಸುಧೀಂದ್ರ ಬಿ ಶೇಟ್, ರಂಜಿತಾ ಎಸ್. ಶೇಟ್, ಮ್ಯಾನೇಜರ್ ರಾಹುಲ್ .ಆರ್. ಶೇಟ್ ಉಪಸ್ಥಿತರಿದ್ದರು.