ಕನ್ನರ್ಪಾಡಿಯ ಶ್ರೀ ಜಯದುರ್ಗೆ ದೇವಾಲಯಕ್ಕೆ ಜೀರ್ಣೋದ್ದಾರ ಸ್ಪರ್ಶ

ಉಡುಪಿ: ಐದು ಸಾವಿರ ವರ್ಷಗಳ ಇತಿಹಾಸವಿರುವ ಉಡುಪಿಯ ಕನ್ನರ್ಪಾಡಿಯ ಶ್ರೀ ಜಯದುರ್ಗೆ ದೇವಸ್ಥಾನದ ಬ್ರಹ್ಮಾಕಲಷಾಭಿಷೇಕವು ಇದೇ ಮಾರ್ಚ್ 30 ರಂದು ನಡೆಯಲಿದೆ. ಬ್ರಹ್ಮ ಕಲಶೋತ್ಸವದ ಅಂಗವಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ದೇವಳದ ಸುತ್ತುಪೌಳಿ ಶಿಥಿಲವಾಗಿದ್ದು ನೂತನ ದಾಸೋಹ ಭವನ, ವ್ಯವಸ್ಥಿತ ಅಡುಗೆ ಶಾಲೆ, ತೀರ್ಥಮಂಟಪ ಧ್ವಜಸ್ಥಂಭಕ್ಕೆ ಬೆಳ್ಳಿಕವಚದ ನಿರ್ಮಾಣ, ನೂತನ ಸ್ವಾಗತ ಗೋಪುರ ಸಹಿತ ಜೀರ್ಣೋದ್ಧಾರಕ್ಕೆ 15 ಕೋಟಿ ರೂ.ಯೋಜನೆ ಜೀರ್ಣೋದ್ದಾರ ಕಾರ್ಯ ನಡೆದಿದೆ. ಉಡುಪಿ ಶ್ರೀಕೃಷ್ಣ ಮಠದಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿ ರಾ.ಹೆ.66 ರ ಪಕ್ಕದಲ್ಲಿರುವ ಕನ್ನರ್ಪಾಡಿ ಸನ್ನಿಧಿಯು ಕಣ್ವ ಮಹಿರ್ಷಿಗಳ ತಪೋಭೂಮಿ ಎಂದೆ ಪ್ರಸಿದ್ಧವಾಗಿದೆ. ಯತಿ ಶ್ರೇಷ್ಠ ಕಣ್ವರು ದೇವಳದ ಎದುರು ಬದಿಯ ಸರೋವರದ ಸನಿಹ ನೆಲೆಯಾಗಿ ಮಾಡಿದ ತಪಸ್ಸಿಗೆ ಒಲಿದ ಜಯದುರ್ಗೆಯು ಶಿಲಾ ರೂಪದಲ್ಲಿ ನೆಲೆಯಾಗಿದ್ದಾಳೆ.

ಪುಣ್ಯಭೂಮಿ ಕಣ್ವರಪಾಡಿ ಕಾಲಾನುಕ್ರಮದಲ್ಲಿ ಕನ್ನರ್ಪಾಡಿಯಾಗಿದೆ.
ರೇಷ್ಮೆಸೀರೆ, ತುಂಡು ಮಲ್ಲಿಗೆ ಅರ್ಪಿಸಿದರೆ ಭಕ್ತರ ಅಭೀಷ್ಟ ಪೂರೈಸುತ್ತಾಳೆ ಎನ್ನುವುದು ಇಲ್ಲಿಯ ನಂಬಿಕೆ. ದೇವಿಯ ಶಿರದ ಮೇಲೆ ಚಂದ್ರ, ತ್ರಿನೇತ್ರಧಾರಿ ಜಯದುರ್ಗೆಯ ಕೈಗಳಲ್ಲಿ ಶಂಖ, ಚಕ್ರ, ಕೃಪಾಣ, ಅಗ್ನಿ ತ್ರಿಶಖೆಯಿದ್ದು ಸಿಂಹಕ್ಕೆ ಒರಗಿ ನಿಂತು ತನ್ನನ್ನು ನಂಬಿ ಬಂದ ಭಕ್ತರಿಗೆ ಅಭಯ ನೀಡುತ್ತಿದ್ದಾಳೆ. ಕ್ಷೇತ್ರದಲ್ಲಿ ಇಂದಿಗೂ ಮರದ ಮೇಲೆ ಮುಳ್ಳುಳ್ಳ ಪಾದುಕೆ ಧರಿಸಿದ ದರ್ಶನ ಪಾತ್ರಿಗಳಿಂದ ಸಮಸ್ಯೆಗಳ ಪರಿಹಾರ ಪಡೆಯುವ ಕ್ರಮ ಜಾರಿಯಲ್ಲಿದೆ. ಈ ದೇವಸ್ಥಾನದಲ್ಲಿ ದೈವ ದೇವರುಗಳ ಸಮಾಗಮವನ್ನು ಕಾಣಬಹುದಾಗಿದ್ದು, ಮಹಾಗಣಪತಿ, ಶ್ರೀಸುಬ್ರಹ್ಮಣ್ಯ ದೇವರುಗಳ ಜೊತೆ, ನಂದಿಕೇಶ್ವರ, ರಕ್ತೇಶ್ವರಿ, ನಾಗದೇವರು, ಕಲ್ಲುಕುಟ್ಟಿಗ, ಕ್ಷೇತ್ರಪಾಲರನ್ನು ಕಾಣಬಹುದಾಗಿದೆ. ಇಲ್ಲಿನ ಕಣ್ವ ಮಹಿರ್ಷಿ ಪುಷ್ಕರಣಿ ದೇವಿ ಸನ್ನಿಧಾನದ ಮಹತ್ವವನ್ನು ಹೆಚ್ಚಿಸಿದೆ.

ಕಾಮಗಾರಿ ಸ್ಪರ್ಶ
ದೇಗುಲವನ್ನು ಸಂಪೂರ್ಣ ಜೀರ್ಣೋದ್ದಾರ ಗೊಳಿಸಲು ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಮುಂದಾಗಿದ್ದು, 15 ಕೋಟಿ ರೂಪಾಯಿ ಯೋಜನೆ ಇದೀಗ ಸಿದ್ಧಗೊಂಡಿದ್ದು ಮರ ಮತ್ತು ಶಿಲೆಗೆ ಸಂಬಂಧಿಸಿದ ಕಾಮಗಾರಿ ಇದೀಗ ಪ್ರಗತಿಯಲ್ಲಿದೆ.

ನೂತನ ದಾಸೋಹ ಭವನ, ವ್ಯವಸ್ಥಿತ ಅಡುಗೆ ಶಾಲೆ, ಶಿಥಿಲಗೊಂಡ ಸುತ್ತುಪೌಳಿ ತೀರ್ಥ ಮಂಟಪ ಮತ್ತು ಧ್ವಜಸ್ತಂಭಕ್ಕೆ ಬೆಳ್ಳಿ ಕವಚ ಹೊದಿಕೆ, ನೂತನ ಸ್ವಾಗತ ಗೋಪುರ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜೀರ್ಣೋದ್ದಾರ ಕಾಮಗಾರಿಗಳೊಂದಿಗೆ ಶ್ರೀದೇವಿಗೆ ಬ್ರಹ್ಮಕುಂಭಾಭಿಷೇಕವನ್ನು ಭಕ್ತರ ಸಹಕಾರದಲ್ಲಿ 2020ರ ಮಾರ್ಚ್ 30ರಂದು ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ.


ದೇಗುಲದ ಹಿನ್ನೆಲೆ:
ಈ ದೇಗುಲ ಐತಿಹಾಸಿಕ ಮಹತ್ವ ಪಡೆದ ದೇಗುಲ. ದೇಗುಲದ ಗರ್ಭಗೃಹದ ಶಿಲಾಸ್ತಂಭದಲ್ಲಿನ ಕೆತ್ತನೆಯ ವಾಕ್ಯಗಳಿಂದ ಹಾಗೂ ಈ ದೇಗುಲದಲ್ಲಿ ಇತ್ತೀಚಿಗೆ ನಡೆದ ದೇವಪ್ರಶ್ನೆಯಲ್ಲಿ ಕಂಡುಬಂದಂತೆ ದೇಗುಲಕ್ಕೆ ಸುಮಾರು 5000 ವರ್ಷಗಳ ಐತಿಹ್ಯವಿರುವ, 16ನೇ ಶತಮಾನಕ್ಕಿಂತಲೂ ಪೂರ್ವದಲ್ಲಿರುವ ಹಾಗೂ ಕಲಿಯುಗದ ಪ್ರಾರಂಭದ ಕಾಲದಲ್ಲಿತ್ತೆಂದು ಇತಿಹಾಸಕಾರರ ಅಂಬೋಣ.
ಕಣ್ವ ಮಹರ್ಷಿಗಳ ತಪೋಭೂ\ಮಿಯಾದ ಕನ್ನರ್ಪಾಡಿ ದೇಗುಲವು ಅಪೂರ್ವ ಶಕ್ತಿ ಕೇಂದ್ರವಾಗಿದೆ.


ತಗಲುವ ವೆಚ್ಚ
ನಮಸ್ಕಾರ ಮಂಟಪ 17 ಲಕ್ಷ ರೂ., ಮುಖ ಮಂಟಪ 15,50,000, ಉಪಸಾನಿಧ್ಯಗಳ ನಿರ್ಮಾಣ (ರಕ್ತೇಶ್ವರಿ, ಕ್ಷೇತ್ರಪಾಲ ಗುಡಿ) 2,30,000 ರೂ., ವಾಲಗ ಮಂಟಪ 4,50,000 ರೂ., ಒಳಾಂಗಣಕ್ಕೆ ಗ್ರಾನೈಟ್ ನೆಲಹಾಸು ಒದಗಿಸುವಿಕೆ 5,50,000 ರೂ., ನಾಗ ಸಾನಿಧ್ಯ ನಿರ್ಮಾಣ 1,50,000 ರೂ., ನಂದಿಗೋಣ ಗುಡಿ ನಿರ್ಮಾಣ 24 ಲಕ್ಷ ರೂ., ಹೊರಾಂಗಣಕ್ಕೆ ಕಲ್ಲು ಚಪ್ಪಡಿ, ಆವರಣ ಗೋಡೆ ನಿರ್ಮಾಣ 34 ಲಕ್ಷ ರೂ., ಅಗ್ರಸಭೆ ನಿರ್ಮಾಣ 98,50,000 ಲಕ್ಷ ರೂ., ರಾಜಗೋಪುರ 1,85,000 ರೂ., ಸುತ್ತುಪೌಳಿ ನಿರ್ಮಾಣ 1,80,000 ರೂ. ವೆಚ್ಚದಲ್ಲಿ ತಗಲಲಿದೆ.


ಭಕ್ತರ ಬೆಂಬಲ ಬೇಕು:
ಬೆಂಗಳೂರು, ಚೆನ್ನೈ, ಹೈದರಾಬಾದ್,ಮುಂಬಯಿ ನ ಭಕ್ತರು ಈಗಾಗಲೇ ಸಮಿತಿಗಳನ್ನು ರಚಿಸಿಕೊಂಡು ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದಾರೆ. ಈ ಪುಣ್ಯ ಕಾರ್ಯದಲ್ಲಿ ಭಕ್ತರಿಂದ ತನು, ಮನ, ಧನದ ಸಹಕಾರ ಅವಶ್ಯವಾಗಿದ್ದು, ನಗದು/ಚೆಕ್ ರೂಪದಲ್ಲಿ ದೇಣಿಗೆ ನೀಡಲು ಇಚ್ಛಿಸುವ ಭಕ್ತರು ಸಿಂಡಿಕೇಟ್ ಬ್ಯಾಂಕ್ ಬ್ರಹ್ಮಗಿರಿ ಶಾಖೆ ಎಸ್.ಬಿ. ಖಾತೆ ಸಂಖ್ಯೆ: 02222010007540, ಐ.ಎಫ್.ಎಸ್.ಸಿ. ಕೋಡ್: SYNB0000222 ಅಥವಾ ಕರ್ನಾಟಕ ಬ್ಯಾಂಕ್ ಕನ್ನರ್ಪಾಡಿ ಶಾಖೆ ಎಸ್.ಬಿ. ಖಾತೆ ಸಂಖ್ಯೆ: 4572500100277601, ಐ.ಎಫ್.ಎಸ್.ಸಿ. ಕೋಡ್: KARB0000457 ಗೆ ಜಮಾ ಮಾಡಬಹುದೆಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಅಧ್ಯಕ್ಷ ಎನ್. ಮುರಳಿಧರ ಬಲ್ಲಾಳ್, ಕಾರ್ಯಧ್ಯಕ್ಷ ಟಿ. ಸುಕುಮಾರ್, ಪ್ರಧಾನ ಕಾರ್ಯದರ್ಶಿ ಸಂಜೀವ ಎ., ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ ಆಚಾರ್ಯ, ಸದಸ್ಯ ಪುರುಷೋತ್ತಮ ಪಿ. ಶೆಟ್ಟಿ, ವ್ಯವಸ್ಥಾಪನ ಸಮಿತಿ ಅರ್ಚಕ ವರ್ಗದ ಸದಸ್ಯ ಗುರುರಾಜ ಉಪಾಧ್ಯ, ಸದಸ್ಯರಾದ ನಿರೂಪಮಾ, ಪ್ರಸಾದ್ ಶೆಟ್ಟಿ, ಶಾರದಾ ಸೂರು ಕರ್ಕೇರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!