ಉಡುಪಿ: ಹೂಡಿಕೆ ಹೆಸರಿನಲ್ಲಿ ಯುವತಿಗೆ 12.46ಲಕ್ಷ ರೂ. ವಂಚನೆ
ಉಡುಪಿ: ಹೂಡಿಕೆ ಹಣಕ್ಕೆ ಕಮಿಷನ್ ನೀಡುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಪ್ನಾ(28) ಎಂಬವರ ಇನ್ಸ್ಟಾಗ್ರಾಮ್ ಖಾತೆಗೆ ಡಿ.9ರಂದು ʼವರ್ಕ್ ಪ್ರಮ್ ಹೋಮ್ʼ ಲಿಂಕ್ ಬಂದಿದ್ದು, ಅದನ್ನು ಓಪನ್ ಮಾಡಿದ ನಂತರ ಅದರಲ್ಲಿ ಹಣ ಹೂಡಿಕೆ ಮಾಡಲು ತಿಳಿಸಲಾಗಿತ್ತು. ಅದನ್ನು ನಂಬಿದ ಸಪ್ನಾ ಹೆಚ್ಚಿನ ಕಮಿಷನ್ ಬರುವುದಾಗಿ ಡಿ.9ರಿಂದ ಡಿ.28ರ ಮಧ್ಯಾವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕಿನ ಖಾತೆಗಳಿಗೆ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದರು. ಆದರೆ ದುಷ್ಕರ್ಮಿಗಳು ಆ ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ದೂರಲಾಗಿದೆ.