ಅಡುಗೆ ಸರಿಯಾಗಿಲ್ಲವೆಂದು ಪತಿಯಿಂದಲೇ ನವವಿವಾಹಿತೆ ಹತ್ಯೆ 

ಪುತ್ತೂರು : ಇಲ್ಲಿನ ಪಾಣಾಜೆ ಕಲ್ಲಾಪದವುನಲ್ಲಿ ಪತಿಯೇ ಪತ್ನಿಯನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.  ಅಕ್ಷತಾ (21) ಪತಿಯಿಂದಲೇ ಹತ್ಯೆಗೀಡಾದ ದುರ್ದೈವಿ , ಪತಿ ಗಣೇಶ್ (35) ಕೂಲಿಕಾರ್ಮಿಕನಾಗಿ ದುಡಿಯುತ್ತಿದ್ದ, ಪ್ರತಿನಿತ್ಯ ದಂಪತಿಗಳ ನಡುವೆ ಕ್ಷುಲಕ ಕಾರಣಕ್ಕೆ ಕಲಹವಾಗುತ್ತಿದ್ದು ನಿನ್ನೆ ಕೂಡ ರಾತ್ರಿ ಇಬ್ಬರ ನಡುವೆ   ಉಂಡು ಮಲಗಿದ ನಂತರ ಪತ್ನಿ ಮಾಡಿದ ಅಡುಗೆ ಸರಿ ಆಗದೆ  ಇರುವುದರ ಬಗ್ಗೆ ಪತಿ ತಗಾದೆ ತೆಗೆದಿದ್ದ. ನಂತರ  ಇಬ್ಬರ ನಡುವೆ ವಾಗ್ವಾದ ತೀವ್ರ ಗೊಳ್ಳುತ್ತಿದ್ದಂತೆ ಕೋಪಗೊಂಡ ಗಣೇಶ್  ಮನೆಯಲ್ಲಿದ್ದ ಚೂರಿಯಿಂದ ಪತ್ನಿಗೆ ತಿವಿದಿದ್ದಾನೆ , ಗಾಯಗೊಂಡ ಅಕ್ಷತಾ ಅಲ್ಲಿಂದ ಹೆದರಿ ಪಕ್ಕದಲ್ಲಿಯೇ ಇದ್ದ ತನ್ನ ತವರು ಮನೆಗೆ ರಕ್ಷಣೆಗಾಗಿ ಹೋಗುವ ಸಂದರ್ಭ ಈತ ಪತ್ನಿಯನ್ನ ಬೆನ್ನಟ್ಟಿ ಮತ್ತೆ ಚೂರಿಯಿಂದ ಇರಿಯಲು ಪ್ರಯತ್ನಿಸಿದಾಗ  ಸ್ಥಳೀಯರು ತಡೆದಿದ್ದಾರೆ .

ಈ ಸಂದರ್ಭ ಹೆದರಿದ ಗಣೇಶ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತೀವ್ರ ಗಾಯಗೊಂಡ  ಅಕ್ಷತಾಳನ್ನು ಮನೆಮಂದಿ ವಿಚಾರಿಸಿದಾಗ ಅಡುಗೆ ವಿಚಾರದಲ್ಲಿ ಕೋಪಗೊಂಡು ಪತಿ ಚೂರಿಯಿಂದ ಇರಿದಿದ್ದಾಗಿ ಹೇಳಿಕೊಂಡಿದ್ದಾಳೆ.  ಕುತ್ತಿಗೆ ಹಾಗು ಮುಖಕ್ಕೆ ಗಂಭೀರ ಗಾಯಗೊಂಡ ಅಕ್ಷತಾ ಸ್ಥಳದಲ್ಲೇ ಕೊನೆಯುಸಿರೆಳೆದಳು. ಕೇವಲ ಒಂದು ವರ್ಷದ ಹಿಂದೆ ಅಷ್ಟೇ ಸಪ್ತಪದಿ ತುಳಿದ ಅಕ್ಷತಾ ಇದೀಗ ತನ್ನ ಪತಿಯಿಂದಲೇ ಮಸಣದ ದಾರಿ ಹಿಡಿದ್ದಾಳೆ …. ಪತಿ ಗಣೇಶ್ ಈಗ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟದಲ್ಲಿ ಇದ್ದಾರೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ

Leave a Reply

Your email address will not be published. Required fields are marked *

error: Content is protected !!