ಬಜೆಟ್ 2020: ಯಾವುದು ದುಬಾರಿ… ಯಾವುದು ಅಗ್ಗ…? ಇಲ್ಲಿದೆ ಮಾಹಿತಿ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶವಿವಾರ ಸಂಸತ್ತನಲ್ಲಿ ಮಂಡಿಸಿದ 2020-2021ನೇ ಸಾಲಿನ ಬಜೆಟ್ ನಲ್ಲಿ ಕಸ್ಟಮ್ಸ್ ಸುಂಕ ಹೆಚ್ಚಳದಿಂದಾಗಿ ಪೀಠೋಪಕರಣ, ಪಾದರಕ್ಷೆ ಬೆಲೆಗಳು ಏರಿಕೆಯಾಗಲಿವೆ.
ಅದೇ ರೀತಿ ಅಬಕಾರಿ ಸುಂಕದ ಹೆಚ್ಚಳದೊಂದಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬೆಲೆಗಳು ಏರಿಕೆಯಾಗಲಿವೆ. ವೈದ್ಯಕೀಯ ಸಾಧನಗಳ ಮೇಲೆ ಶೇ.5 ರಷ್ಟು ಹೆಲ್ತ್ ಸೆಸ್, ಆಟೋ ಮೊಬೈಲ್ ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಹೆಚ್ಚಳಗೊಂಡಿದೆ.
ವಿದೇಶಗಳಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್ ಮೇಲಿನ ತೆರಿಗೆಯನ್ನು ತಗ್ಗಿಸಲಾಗಿದೆ. ಅದೇ ರೀತಿ ಎಲೆಕ್ಟ್ರಿಕ್ ವಾಹನಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಸ್ಟಿಕ್ ಆಧಾರಿತ ಕಚ್ಚಾ ವಸ್ತುಗಳ ಮೇಲಿನ ಕಸ್ಟಮ್ಸ್ ತೆರಿಗೆ ಇಳಿಸಲಾಗಿದೆ.
ಯಾವುದೆಲ್ಲ ಏರಿಕೆ? * ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟಾಗಿದೆ. * ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ. * ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ. * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ. * ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ. * ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ. * ಆಟೋ, ಬೈಕ್, ಕಾರು ದುಬಾರಿ * ಚಪ್ಪಲಿ, ಫರ್ನಿಚರ್ ದುಬಾರಿ * ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆಯಾಗಿದೆ * ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ * ಸಕ್ಕರೆ ಬೆಲೆ ಏರಿಕೆಯಾಗಿದೆ * ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆಯಾಗಿದೆ * ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ. |
ಅಗ್ಗವಾಗಲಿರುವ ವಸ್ತುಗಳು
ವಿದೇಶದಿಂದ ಆಮದು ಮಾಡಿಕೊಂಡ ನ್ಯೂಸ್ ಪ್ರಿಂಟ್
ಎಲೆಕ್ಟ್ರಿಕ್ ವಾಹನಗಳು
ಮೊಬೈಲ್ ಫೋನ್‌ಗಳಿಗಾಗಿ ಬಿಡಿಭಾಗಗಳು
ಪ್ಲಾಸ್ಟಿಕ್ ಆಧಾರಿತ ಕಚ್ಚಾ ಸರಕು.
80 ಸಿ ಶಾಕ್: ಹೊಸ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡ್ರೆ ನಿಮಗೆ 80 ಸಿ ಅನ್ವಯ ಸಿಗಬೇಕಾದ ಯಾವುದೇ ವಿನಾಯಿತಿಗಳು ಸಿಗಲ್ಲ. ಯಾವುದಕ್ಕೆ ತೆರಿಗೆ ವಿನಾಯಿತಿ ಸಿಗಲ್ಲ ಎಂಬುವುದು ಈ ಕೆಳಗಿನಂತಿದೆ.
* ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ ಇರಲ್ಲ.
* ಟಿಎ, ಡಿಎಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
* ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇರಲ್ಲ.
* 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
* ಕುಟುಂಬ ಪಿಂಚಣಿ ಅಡಿ 15 ಸಾವಿರ ಡಿಡಕ್ಷನ್‍ಗೆ ಅವಕಾಶ ಇರಲ್ಲ.
* ಜೀವವಿಮೆಗೆ ತೆರಿಗೆ ವಿನಾಯಿತಿ ಇರಲ್ಲ.
* ಸುಕನ್ಯ ಸಮೃದ್ಧಿ ಯೋಜನೆ ತೆರಿಗೆ ವಿನಾಯಿತಿ ಇರಲ್ಲ.
* ಪಿಪಿಎಫ್‍ಗೆ ತೆರಿಗೆ ವಿನಾಯಿತಿ ಇರಲ್ಲ.
* ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಇರಲ್ಲ.
* ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿ ಇರಲ್ಲ.
* ಹಿರಿಯ ನಾಗರಿಕರ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಇರಲ್ಲ.
* ಮನೆ ಸಾಲಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
* ಸಂಸ್ಥೆಗಳಿಗೆ ನೀಡುವ ಡೊನೇಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
Soo