ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಕಡ್ಡಾಯ: ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ

ಬೆಂಗಳೂರು: ಸಾರ್ವಜನಿಕರು ಮನೆಯಿಂದ ಹೊರಬಂದಾಗಲೆಲ್ಲಾ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿದ್ದು, ಎಲ್ಲರೂ ಮಾಸ್ಕ್ ಗಳನ್ನು ಧರಿಸಬೇಕಾಗಿಲ್ಲ ಎಂದು ಈ ಹಿಂದೆ ಹೊರಡಿಸಲಾಗಿದ್ದ ಸುತ್ತೋಲೆಯನ್ನು ವಾಪಸ್‍ ಪಡೆಯಲಾಗಿದೆ.

ಖರೀದಿ ಸಮಯದಲ್ಲಿ, ಕಚೇರಿ ಕೆಲಸಕ್ಕೆ ಹಾಜರಾದಾಗ ಮತ್ತು ಆಕಸ್ಮಿಕವಾಗಿ ಕೊವಿಡ್ -19 ಸೋಂಕಿತ ವ್ಯಕ್ತಿಯ ಪ್ರಥಮ ಇಲ್ಲವೇ ದ್ವಿಸಂಪರ್ಕಗಳೊಂದಿಗೆ ಸಂವಹನ ನಡೆಸಿದಾಗಲೆಲ್ಲಾ ಸಾರ್ವಜನಿಕರು ಮುಖಗವಸ ಧರಿಸಬೇಕೆಂದು ಸುತ್ತೋಲೆ ಹೇಳಿದೆ. 

ಮಾಸ್ಕ್ ಗಳು ಒಂಬತ್ತು ಇಂಚು ಅಗಲ, ಏಳು ಇಂಚು ಉದ್ದವಿರಬೇಕು. ಮಕ್ಕಳಿಗೆ ಐದು ಇಂಚು ಗಾತ್ರವನ್ನು ಶಿಫಾರಸು ಮಾಡಲಾಗಿದೆ.

ಕೈಯಿಂದ ಇಲ್ಲವೇ ಯಂತ್ರದಿಂದ ಹೊಲಿದಿರುವ ಮುಖಗವಸಗಳನ್ನು ಮರು ಬಳಸಬಹುದಾಗಿದೆ. ಆದರೂ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಸಾರ್ವಜನಿಕರು ತಮ್ಮನ್ನು ರಕ್ಷಿಸಿಕೊಳ್ಳಲು ವೈದ್ಯಕೀಯವಾಗಿ ಪ್ರಮಾಣೀಕರಿಸಿದ ಮುಖಗವಸಗಳನ್ನು ಮಾತ್ರ ಬಳಸಬೇಕಾಗುತ್ತದೆ ಎಂದು ಸುತ್ತೋಲೆ ಹೇಳಿದೆ.

Leave a Reply

Your email address will not be published. Required fields are marked *

error: Content is protected !!