ಎಚ್ಚರ ಎಚ್ಚರ… ಬೈಕ್ ಪೆಟ್ರೋಲ್ ಕದ್ದರೆ !

ಉಡುಪಿ: ಉದ್ಯಾವರ ಸಂಪಿಗೆ ನಗರ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಯುವಕನೊರ್ವ ಪೆಟ್ರೊಲ್ ಕದಿಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮನೆ ಮಾಲೀಕರು ಕಾಪು ಠಾಣೆಗೆ ದುಷ್ಕರ್ಮಿ ಪತ್ತೆಗೆ ದೂರು ನೀಡಿದ್ದಾರೆ.
ಸಂಪಿಗೆ ನಗರದ ಮೀನು ಮಾರುಕಟ್ಟೆ ಬಳಿಯ ನೆಲ್ಲಿಒಲಿವೇರಾ ಮನೆಯಲ್ಲಿ ನಿಲ್ಲಿಸಿದ್ದ ಮೋಟಾರ್ ಬೈಕ್‌ನ ಪೆಟ್ರೋಲ್ ಕಳೆದ ಮೂರು ನಾಲ್ಕು ತಿಂಗಳ ಅವಧಿಯಲ್ಲಿ 7
ಬಾರಿಗಿಂತಲೂ ಹೆಚ್ಚು ಬಾರಿ ತಡ ರಾತ್ರಿ ಕಳ್ಳತನವಾಗುತ್ತಿತ್ತು.

ಇನ್ನು ಇದನ್ನು ಈ ಹೀಗೆ ಬಿಟ್ಟರೆ ನಮ್ಮ ಮನೆಯನ್ನೂ ಒಂದು ದಿನ ದೋಚಬಹುದೆಂದು ಈ ಖದೀಮನನ್ನು ಹಿಡಿಯಲು ಮನೆಗೆ ಸಿಸಿ ಕ್ಯಾಮಾರ ಅಳವಡಿಸಿದ್ದರು ಮನೆಯವರು.ಎಂದಿನಂತೆ ಈ ಬಾರಿಯು ಕಳ್ಳನು ಮನೆ ಗೇಟು ತೆರೆದು ಮನೆಯ ಮುಂಭಾಗ ಇಟ್ಟಿದ್ದ ಪಲ್ಸರ್ ಬೈಕ್‌ನ ಪೆಟ್ರೊಲ್ ಟ್ಯಾಂಕ್‌ನ ಪೈಪ್‌ನ್ನು ತುಂಡರಿಸಿ ಮೂರು ಬಾರಿ ತಾನು ತಂದಿದ್ದ ಬಾಟಲ್‌ಗೆ ತುಂಬಿಸಿ ಹೊರಗೆ ಇಟ್ಟ ತನ್ನ ಬೈಕ್‌ಗೆ ಪೆಟ್ರೋಲ್ ತುಂಬಿಸಿ ಕಳ್ಳನು ಪರಾರಿಯಾದ .

ಆದರೆ ಈ ಬಾರಿ ಆತನ ಗೃಹಚಾರ ಕೆಟ್ಟಿದೆ. ಮನೆಗೆ ಅಳವಡಿಸಿದ ಸಿಸಿ ಕ್ಯಾಮರದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಮಾಲೀಕರು ಅಳವಡಿಸಿದ ಸಿಸಿ ಕ್ಯಾಮರ ನೋಡಿಯೇ ಬಿಟ್ಟ . ಅಲ್ಲಿಂದ ಕಾಲ್ಕಿತ್ತು ಪರಾರಿಯಾಗುವುದು ಬಿಟ್ಟು ಆ ಸಿಸಿ ಕ್ಯಾಮರವನ್ನು ಮೇಲ್ಮೂಕ ತಿರುಗಿಸಿದಾಗ ಮುಖ:ಚರ್ಯೆ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.


ಮನೆ ಮಾಲೀಕೆ ಒಲಿವೇರಾ ಮೊಮ್ಮಗ ಯಾವಾಗ ಬೈಕ್ ಗೆ ಪೆಟ್ರೊಲ್ ತುಂಬಿಸಿ ಮನೆಗೆ ತಂದಿಡುತ್ತಾರೋ ಅದೇ ದಿನ ರಾತ್ರಿ ಬೈಕ್ ನ ಪೆಟ್ರೊಲ್ ಕದಿಯಲಾಗುತ್ತದೆಂದು ಹೇಳುತ್ತಿದ್ದಾರೆ. ಕಳ್ಳತನ ನಡೆಸಿ ಹೋಗುವಾಗ ಬೈಕ್ ಮೇಲಿದ್ದ ಹೆಲ್ಮೆಟ್ ಕೂಡ ಕದ್ದು ಪರಾರಿಯಾಗಿದ್ದನು ಕಳ್ಳ . ಈಗ ಮನೆಯವರು ಕಾಪು ಠಾಣೆಗೆ ದೂರು ನೀಡಿದ್ದು,ಆತನನ್ನು ಆದಷ್ಟು ಬೇಗ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


ಪಿತ್ರೋಡಿ ,ಸಂಪಿಗೆ ನಗರದಲ್ಲಿ ಯುವಕರು ಗಾಂಜಾ ಸೇವನೆ ಮಾಡುವವರು ಕೂಡ ಈ ಭಾದಲ್ಲಿ ಹೆಚ್ಚಿದ್ದು ಆಗೊಮ್ಮೆ ಈಗೊಮ್ಮೆ ಪೊಲೀಸರು ಬಂದು ಯುವಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸುವುದು ಬಿಟ್ಟರೆ ಇವರೆಗೆ ಯಾವುದೇ ಕಠಿಣಾ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ ಇಲ್ಲಿನ ನಾಗರೀಕರದ್ದು.

1 thought on “ಎಚ್ಚರ ಎಚ್ಚರ… ಬೈಕ್ ಪೆಟ್ರೋಲ್ ಕದ್ದರೆ !

Leave a Reply

Your email address will not be published. Required fields are marked *

error: Content is protected !!