ಎಚ್ಚರ! ನಕಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮಲ್ಲಿಗೂ ಬರಬಹುದು

ಉಡುಪಿ: ತಾವು ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಿದ್ದು, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತೇವೆಂದು ಬರುವ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಮಾಹಿತಿ ನೀಡದಂತೆ ಹಾಗೂ ಮನೆಯೊಳಗೆ ಪ್ರವೇಶ ನೀಡದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ
ತಿಳಿಸಿದ್ದಾರೆ.


ಭಾನುವಾರ ಬನ್ನಂಜೆಯ ವಯೋವೃದ್ದ ದಂಪತಿಯ ಮನೆಗೆ ಈ ರೀತಿ ಬಂದ ಅಪರಿಚಿತರು ಮಾಹಿತಿ ಕೋರಿದ್ದು, ಸದ್ರಿ ವಯೋ ವೃಧ್ದ ದಂಪತಿ, ಆರೋಗ್ಯ ಇಲಾಖೆಯ ಗುರುತಿನ ಚೀಟಿ, ದಾಖಲಾತಿ ಕೇಳಿದ್ದು, ಇದರಿಂದ ಅನಧಿಕೃತ ವ್ಯಕ್ತಿಗಳು ಮಾಹಿತಿ
ಕೇಳದೆ ತೆರಳಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಜಿಲ್ಲಾ ಆರೋಗ್ಯ ಇಲಾಖೆಯಿಂದ, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಇವರಿಗೆ ಇಲಾಖೆವತಿಯಿಂದ ಸಮವಸ್ತ್ರ, ಗುರುತಿನ ಚೀಟಿ, ಅಧಿಕೃತ ಆದೇಶ ಪತ್ರ ನೀಡುತ್ತಿದ್ದು, ಇವರು ಮನೆಗೆ ಭೇಟಿ ನೀಡಿದಾಗ ಮಾತ್ರ ಕೋರುವ ಅಗತ್ಯ ಮಾಹಿತಿ ನೀಡುವಂತೆ
ಹಾಗೂ ಇವರನ್ನು ಹೊರತುಪಡಿಸಿ ಇತರೆ ಅನಧಿಕೃತ ವ್ಯಕ್ತಿಗಳು ಮಾಹಿತಿ ಕೇಳಿ ಬಂದಲ್ಲಿ , ತಕ್ಷಣ ಆರೋಗ್ಯ ಇಲಾಖೆಯ ದೂ.ಸಂ. 94498 43066 ಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಡಿಹೆಚ್‍ಓ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!