ಬಡವರ ಸಾಲ ಮನ್ನಾ ಮಾಡಿ ಇಲ್ಲ ಕುರ್ಚಿ ಖಾಲಿ ಮಾಡಿ: ಜಯನ್ ಮಲ್ಪೆ

ಉಡುಪಿ : ಕಾನೂನು ಬಾಹಿರವಾದ ಬಡ್ಡಿ ವಿಧಿಸಿ, ಸಾಲ ನೀಡಿದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದೌರ್ಜನ್ಯದಿಂದ ಬಡಮಹಿಳೆಯರ ಸಾವುನೋವು ಸಂಭವಿಸುತ್ತಿದ್ದು,ಸರಕಾರ ತಕ್ಷಣ ಇವರ ಕೈಸಾಲವನ್ನು ಮನ್ನಾಮಾಡಿ ಇಲ್ಲವಾದಲ್ಲಿ ಕುರ್ಚಿ ಖಾಲಿಮಾಡಿ ಎಂದು ಸರಕಾರಕ್ಕೆ ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.


ಅವರು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಅಂಬೇಡ್ಕರ್ ಯುವಸೇನೆ ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯದ ವಿರುದ್ಧ ಮತ್ತು ಸಾಲ ಮನ್ನಾಕ್ಕಾಗಿ ನಡೆಸಿದ ಬೃಹತ್ ಧರಣಿಯಲ್ಲಿ ಮಾತನಾಡುತ್ತಾ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಮಹಿಳೆಯರ ಮೇಲೆ ನಡೆಸುತ್ತಿರುವ ಮಾನಸಿಕ ಹಿಂಸೆಯಿಂದ ಅನೇಕ ಸಾವುನೋವುಗಳಿಗೆ ಸಂಭವಿಸಿದ್ದು ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ ಅವರು ಗ್ರಾಮೀಣ ಪ್ರದೇಶದಲ್ಲಿ ಬಡತನ ನಿರ್ಮೂಲನೆಮಾಡುವುದಾಗಿ ಹೇಳಿಕೊಂಡು ಆರ್‌ಬಿಐ ಪರವಾನಿಗೆಯನ್ನು ಉಲ್ಲಂಘಿಸಿ,ಜನತೆಗೆ ಮೋಸ ಮಾಡಿದ ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಾತಿಯ ನೆಪದಲ್ಲಿ ಮಹಿಳೆಯರಿಗೆ ಹಿಂಸಿಸುದಲ್ಲದೆ ಅಪಮಾನಿಸುವುದು, ಬೆದರಿಸುವುದನ್ನು ನಿಲ್ಲಿಸದಿದ್ಧಲ್ಲಿ ಉಗ್ರಹೋರಾಟ ನಡೆಸುವುದಾಗಿ ಜಯನ್ ಮಲ್ಪೆ ಎಚ್ಚರಿಸಿದರು.


ದ,ಕ ಜಿಲ್ಲಾ ಋಣಮುಕ್ತ ಹೋರಾಟದ ಜಿಲ್ಲಾ ಸಂಚಾಲಕರಾದ ಬಿ.ಎಂ.ಭಟ್ ಮಾತನಾಡಿ ಮೈಕ್ರೋ ಫೈನಾನ್ಸ್‌ಗಳು ಬಡ ಮಹಿಳೆಯರ ಮೇಲೆ ನಡೆಸುತ್ತಿರುವ ಮಾನಸಿಕ ದೌರ್ಜನ್ಯ ಅಪಾಯಕಾರಿಯಾಗಿದೆ.ಈ ಸಂಕೋಲೆಯಿಂದ ಮಹಿಳೆಯರನ್ನು ಪಾರುಮಾಡಿ ಅವರ ಸಬಲೀಕರಣಕ್ಕೆ ಸರಕಾರ ಮುಂದಾಗದಿದ್ದರೆ ಜೈಲು ಸೇರಲು ನಾವು ಸುದ್ಧರಿದೇವೆ ಎಂದರು. ಜಾತ್ಯತೀತ ಜನತಾ ದಳದ ಉಡುಪಿ ಜಿಲ್ಲಾಧ್ಯಾಕ್ಷ ಯೋಗಿಶ್ ಶೆಟ್ಟಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಜಾರಿತಂದ ಋಣಮುಕ್ತ ಕಾಯ್ದೆ ಜಾರಿಯಾಗಿದ್ಧಲ್ಲಿ ಇಂದು ಸಾವಿರಾರು ಬಡ ಮಹಿಳೆಯರು ಈ ರಣಬಿಸಿಲಿನಲ್ಲಿ ಧರಣಿ ನಡೆಸುವ ಅಗತ್ಯವಿರಲ್ಲಿಲ್ಲ ಆದರೂ ಈ ಕಾಯ್ದೆ ಜಾರಿಯಾಗುವಲ್ಲಿ ನಾವೇಲ್ಲ ಸಂಘಟಿತ ಹೋರಾಟ ನಡೆಸೋಣ ಎಂದರು.


ಬೆಳ್ತಂಗಡಿಯ ಈಶ್ವರಿ,ಪ್ರಗತಿಪರ ಚಿಂತಕ ಸಂಜೀವ ಬಳ್ಕೋರು,ಎಲ್ .ಮಂಜುನಾಥ, ಸುನೀಲ್ ಹೆಗ್ಡೆ, ಮಂಜುನಾಥ ಮುಂತ್ತಾದವರು ಮಾತನಾಡಿದರು. ಧರಣಿಯಲ್ಲಿ ದಲಿತ ಮುಖಂಡ ಸುಂದರ್ ಕಪ್ಪೆಟ್ಟು,ಹರೀಶ್ ಸಾಲ್ಯಾನ್, ಗುಣಪಾಲ ತೊಟ್ಟಂ,ರಮೇಶ್ ಪಾಲ್,ಸಂತೋಷ್ ಕಪ್ಪೆಟ್ಟು,ಅನಿಲ್ ಅಂಬಲಪಾಡಿ,ಮಂಜುನಾಥ ಕಪ್ಪೆಟ್ಟು,ಭಗವಾನ್,ಅರುಣ ನೆರ್ಗಿ,ದಿನೇಶ್ ಮೂಡುಬೆಟ್ಟು,ಗಣೇಶ್ ನೆರ್ಗಿ,ಪ್ರಸಾದ್ ಮಲ್ಪೆ,ಮೋಹನ್‌ದಾಸ್,ಸತೀಶ್ ಕಪ್ಪಟ್ಟು, ಯುವರಾಜ್ ಪುತ್ತೂರು,ಸುಕೇಶ್ ನಿಟ್ಟೂರು,ಸಂಪತ್ ಗುಜ್ಜರಬೆಟ್ಟು ಮುಂತ್ತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!