ಸರ್ಕಾರ ನೆರವು ನೀಡದಿದ್ದರೆ ವೊಡಾಫೋನ್-ಐಡಿಯಾ ಬಂದ್: ಕೆಎಂ ಬಿರ್ಲಾ

ನವದೆಹಲಿ: ಕೇಂದ್ರ ಸರ್ಕಾರ ನಮ್ಮ ಕಂಪನಿ ಕೇಳಿರುವ ನೆರವು ನೀಡದಿದ್ದರೆ ವೊಡಾಫೋನ್-ಐಡಿಯಾ ಟೆಲಿಕಾಂ ಸಂಸ್ಥೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿರ್ಲಾ ಅವರು, ನಮ್ಮ ಕಂಪನಿ ಮುಚ್ಚಬೇಕಾದ ಸ್ಥಿತಿ ಬಂದಿದೆ ಎಂದು ಹೇಳುವ ಮೂಲಕ, ಕೇಂದ್ರ ಸರ್ಕಾರ ಪರಿಹಾರ ನೀಡದಿದ್ದರೆ ನಮ್ಮ ಕಂಪನಿ ಭಾರತದಲ್ಲಿ ಇನ್ನಷ್ಟು ಹೂಡಿಕೆ ಮಾಡುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ.

ಸರ್ಕಾರದಿಂದ ಪರಿಹಾರ ದೊರೆಯದಿದ್ದರೆ ಟೆಲಿಕಾಂ ಸಂಸ್ಥೆ ದಿವಾಳಿಯಾಗಿದೆ ಎಂದು ಘೋಷಿಸಬೇಕಾಗುತ್ತದೆ ಎಂದು ಬಿರ್ಲಾ ಅವರು ಹೇಳಿದ್ದು, ಅವರ ಹೇಳಿಕೆ ಬೆನ್ನಲ್ಲೇ ವೊಡಾಫೋನ್-ಐಡಿಯಾ ಕಂಪನಿಯ ಷೇರುಗಳು ಬೆಲೆ ಶೇ.9ರಷ್ಟು ಕುಸಿತ ಕಂಡರೂ ನಂತರ ಚೇತರಿಸಿಕೊಂಡಿತು.

2 thoughts on “ಸರ್ಕಾರ ನೆರವು ನೀಡದಿದ್ದರೆ ವೊಡಾಫೋನ್-ಐಡಿಯಾ ಬಂದ್: ಕೆಎಂ ಬಿರ್ಲಾ

  1. Dhamki hai kya birla ka? Bandh maadri, jio Airtel and bsnl will rule our telecom industry in India. All private players like you looted a lot before jio entry. Let you both shut and bsnl will become a strong player in indian market.

Leave a Reply

Your email address will not be published. Required fields are marked *

error: Content is protected !!