ವಿಟ್ಲ: ಸಲಿಂಗ ಕಾಮುಕನ ಬಂಧನ
ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ 9ನೇ ತರಗತಿಯ ಬಾಲಕನಿಗೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು,ಈ ಬಗ್ಗೆ ಆರೋಪಿ ವಿರುದ್ದ ಪೋಕ್ಸೊ ಕಾಯಿದೆಯಡಿ ಕೇಸ್ ದಾಖಲಾಗಿದೆ. ಆರೋಪಿ ವಿಟ್ಲ ಕನ್ಯಾನ ಗ್ರಾಮದ ಸುರೇಶ್ ಪ್ರಭು (31) ಎಂಬಾತನನ್ನು ಬಂಧಿಸಲಾಗಿದೆ.
ಈ ಪ್ರಕರಣದ ಸಂತ್ರಸ್ಥ ಬಾಲಕನು ತರಗತಿಯನ್ನು ಮುಗಿಸಿ ಕಾಲೇಜಿನ ಮುಂಭಾಗ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ ಆರೋಪಿ ಬಾಲಕನನ್ನು ಪುಸಲಾಯಿಸಿ ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿದೆ. ಈ ಬಗ್ಗೆ ಬಾಲಕನ ತಾಯಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.