“ಪಕ್ಕೆಲಬು” ವಿಡಿಯೋ ವೈರಲ್: ಶಿಕ್ಷಕನ ಮೇಲೆ ಕ್ರಮ
ಬೆಂಗಳೂರು ; ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗಿರುವ ವಿದ್ಯಾರ್ಥಿಯೊಬ್ಬನ “ಪಕ್ಕೆಲಬು” ಎಂಬ ಪದದ ತಪ್ಪು ಉಚ್ಚಾರಣೆಯನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಚಾರ ಇದೀಗ ಆ ಶಿಕ್ಷಕನನ್ನು ಹುಡುಕಿ ಆತನ ಮೇಲೆ ಕೇಸು ಹಾಕುವಂತೆ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ ಕುಮಾರ್ ಸೈಬರ್ ಕ್ರೈಂ ಠಾಣೆಗೆ ಆದೇಶಿಸಿದ್ದಾರೆ.
ಸುಮಾರು 2 ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಪುಟ್ಟ ಬಾಲಕ “ಪಕ್ಕೆಲಬು” ಎಂಬ ಪದದ ಉಚ್ಚರಣೆಯನ್ನ ತಪ್ಪಾಗಿ ಹೇಳುತ್ತಿದ್ದ ವಿಡಿಯೋ ವೈರಲ್ ಆಗಿದ್ದು ವಿಡಿಯೋ ಮಾಡಿದ್ದ ಶಿಕ್ಷಕನನ್ನು ನೆಟ್ಟಿಗರು ಸಿಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದೀಗ ಸಚಿವಾಲಯದಿಂದ ಬಂದ ಸುತ್ತೋಲೆಯಲ್ಲಿ” ಶಿಕ್ಷಕರಾದವರು ಮಕ್ಕಳು ಮಾಡುವ ಉಚ್ಚಾರಣೆಯನ್ನು ತಿದ್ದಬೇಕು ಮಕ್ಕಳಿಂದ ಉಚ್ಚಾರಣೆದೋಷವಾಗುವುದು ಸಹಜ ಆದರೆ ಈ ರೀತಿ ವಿಡಿಯೋ ಮಾಡಿ ಮಕ್ಕಳು ಅಪರಾಧ ಮಾಡಿದಂತೆ ಬಿಂಬಿಸುವುದು ಸರಿಯಲ್ಲ.ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವವುದರಿಂದ ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿ ಮಗು ಕಲಿಕೆಯಲ್ಲಿ ಹಿಂದುಳಿಯಬಹುದು ಹಾಗಾಗಿ ಇಂತಹ ಕೃತ್ಯ ಮಾಡಿದ ಶಿಕ್ಷಕನನ್ನು ಗುರುತಿಸಿ ಸರಿಯಾದ ಶಿಕ್ಷೆ ನೀಡುವಂತೆ ಸೈಬರ್ ಕ್ರೈಂ ಠಾಣೆಗೆ ಆದೇಶಿಸಲಾಗಿದೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸುತ್ತೋಲೆಯನ್ನ ಹೊರಡಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂದೆ ಇಂತಹ ಘಟನೆ ನಡೆದ್ದಲ್ಲಿ ಶಿಕ್ಷಕರು ಹಾಗು ಶಾಲಾ ಮುಖ್ಯಸ್ಥರ ಮೇಲೆ ಕ್ರಿಮಿನಲ್ ಮೊಕ್ಕದ್ದಮೆ ಹೂಡುವುದ್ದಲ್ಲದ್ದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.