ಕುಂದಾಪುರ ಪೊಲೀಸರ ನಿಂದಿಸಿದ ವಿಡಿಯೋ ವೈರಲ್: ಮಹಿಳೆ ವಿರುದ್ಧ ದೂರು

ಕುಂದಾಪುರ: ವಾಹನ ತಪಾಸಣೆ ಮಾಡುವಾಗ ಪೊಲೀಸರ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಅದನ್ನು ವೈರಲ್ ಮಾಡಿದ ಮಹಿಳೆ ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಜ.20 ರಂದು ಕುಂದಾಪುರ ಎಎಸೈ ತಾರಾನಾಥ್ ಹೈವೇ ಪ್ರಟ್ರೋಲ್ ವಾಹನದಲ್ಲಿ ಚಾಲಕ ಅಶ್ರಫ್, ಹೋಮ್ ಗಾರ್ಡ್ ಸಿಬ್ಬಂದಿ ಸಂದೀಪ ದಾಸ್‌ರೊಂದಿಗೆ ಹೆಮ್ಮಾಡಿ ಸಮೃದ್ದಿ ಹೋಟೇಲ್ ಸಮೀಪ ರಾಪ್ಷ್ರೀಯಾ ಹೆದ್ದಾರಿ ಬದಿಯಲ್ಲಿ ವಾಹನ ನಿಲ್ಲಿಸಿ ವಾಹನ ತಪಾಸಣೆ ಮಾಡುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಕಾರು ಚಲಾಯಿಸಿಕೊಂಡು ಬಂದ ಶಾಂತಿ ಪಿಕಾರ್ಡೊ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿ ಸೀಟ್ ಬೆಲ್ಟ್ ಹಾಕದೇ ಇರುವ ಅಪರಾಧಕ್ಕೆ ರೂ. 500 ದಂಡ ತೆರುವಂತೆ ಸೂಚಿಸಿದ್ದರು.


ಆಗ ಶಾಂತಿ ನಾನು ಸೀಟ್ ಬೆಲ್ಟ್ ಹಾಕಿದ್ದೇನೆ ಮತ್ತೆ ನೀವು ಹಾಕುವುದಿಲ್ಲ ಎಂದು ಹೇಳುವುದು ಏಕೆ? ನೀವು ಹಣ ಮಾಡುವುದಕ್ಕೆ ರಸ್ತೆ ಮೇಲೆ ನಿಲ್ಲುವುದು. ಚೆಕ್ಕಿಂಗ್ ಅಂತಾ ನಿಲ್ಲುವುದು ಸುಮ್ನೆ ಹಣ ಕೀಳುವುದು, ಯಾವ ಸ್ಟೇಶನ್ ಬರ್ತದೆ ನಿಮ್ದು, ಪೊಲೀಸರು ಸೋಮಾರಿ ಹಾಗೆ ನಿಲ್ಲುವುದು ಎಂದು ಏರು ಧ್ವನಿಯಲ್ಲಿ ಮಾತನಾಡಿ ಕಾರಿನ ದಾಖಲಾತಿ ತಪಾಸಣೆ ಮಾಡಲು ಬಿಡದೇ ಹಾಗೂ ಇತರ ವಾಹನಗಳನ್ನು ತಪಾಸಣೆ ಮಾಡಲು ಬಿಡದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ತಡೆಯೊಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಕಾರಿನ ಚಾಲಕರಿಗೆ ಅವರ ತಪ್ಪಿನ ಬಗ್ಗೆ ಮೋಟಾರು ವಾಹನ ಕಾಯ್ದೆಯಡಿ ಪೊಲೀಸ್ ನೋಟೀಸು ಬರೆದು ಕೊಟ್ಟರೂ ನೋಟಿಸನ್ನು ತೆಗೆದುಕೊಳ್ಳಲು ನಿರಾಕರಿಸಿರುತ್ತಾರೆ. ಹಾಗೂ ಕಾರಿನ ಚಾಲಕಿಯು ನಿಂದಿಸಿ ವಾಗ್ವಾದ ಮಾಡುವಾಗ ಅವರ ಮೊಬೈಲ್ ನಿಂದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸರಕಾರಿ ಕರ್ತವ್ಯವನ್ನು ನಿರ್ವಹಿಸಲು ಮನಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದ್ದರಿಂದ ಶಾಂತಿ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

4 thoughts on “ಕುಂದಾಪುರ ಪೊಲೀಸರ ನಿಂದಿಸಿದ ವಿಡಿಯೋ ವೈರಲ್: ಮಹಿಳೆ ವಿರುದ್ಧ ದೂರು

  1. Police really work hard then others dept. Tell me which police celebrate their festival with family….they reserved for our safty..
    making videos insulting dept will not be tolerable. Pls respect.
    How many police excusees public ofence without penalty with humanity base… Why dont u make such video to sau thanks..

  2. Police really work hard then others dept. Tell me which police celebrate their festival with family….they reserved for our safty..
    making videos insulting dept will not be tolerable. Pls respect.
    How many police excusees public ofence without penalty with humanity base… Why dont u make such video to say thanks..

  3. I also noticed this kind of situation @ same place.
    So many people complaint this kind of issue
    But still why they action on this…!

    Who’ll response ??? Wen people get freedom..???

  4. I also noticed this kind of situation @ same place.
    So many people complaint this kind of issue
    But still why they not action on this…!

    Who’ll response ??? Wen people get freedom..???

Leave a Reply

Your email address will not be published. Required fields are marked *

error: Content is protected !!