ಉಡುಪಿ : ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ ನಿಷೇಧಕ್ಕೆ ವಿಹಿಂಪ ಆಗ್ರಹ
ಉಡುಪಿ: ಬಕ್ರೀದ್ ಹಬ್ಬದಂದು ಗೋವುಗಳ ಸಹಿತ ಎಲ್ಲಾ ಪ್ರಾಣಿಗಳನ್ನು ಬಲಿ ಕೊಡುವುದನ್ನು , ಕಟ್ಟು ನಿಟ್ಟಾಗಿ ನಿಷೇಧಿಸಬೇಕೆಂದು ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದ್ದು, ಯಾವುದೇ ಕಾರಣಕ್ಕೂ ಗೋವುಗಳ ವಧೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ತಡೆಯಬೇಕು ಎಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ
ಪ್ರಾಣಿಗಳ ಬಲಿ ನೀಷೇದ ಕಾಯಿದೆಯನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ಕುರ್ಬಾನಿ ಕೊಡಲು ಪ್ರಾಣಿಗಳ ಶೇಖರಣೆ ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್ ಗೋವುಗಳ ರಕ್ಷಣೆಗೆ ಇರುವ ಕಾನೂನು ಅನುಷ್ಠಾನಗೊಳಿಸಲು ಕಾರ್ಯ ಮಾಡಿಕೊಂಡು ಬಂದಿದ್ದು, ಕರ್ನಾಟಕದಲ್ಲಿ ಎಲ್ಲಾ ಪ್ರಾಣಿಗಳ ಬಲಿಯನ್ನು ನಿಷೇಧಿಸಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ ೧೯೫೯ ಜಾರಿಯಲಿದೆ. ೧೯೫೯ ರಲ್ಲಿ ಇದು ಹಿಂದುಗಳಿಗೆ ಮಾತ್ರ ಅನ್ವಯವಾಗುವಾಗುತ್ತಿತ್ತು ಆದರೆ ೧೯೭೫ ರಲ್ಲಿ ಅದನ್ನು ಎಲ್ಲಾ ಧರ್ಮದವರಿಗೆ ಅನ್ವಯಿಸುವಂತೆ ತಿದ್ದುಪಡಿ ಮಾಡಿರುವುದರಿಂದ ಬಕ್ರೀದ್ ಕುರ್ಬಾನಿ ಕೊಡುವುದಕ್ಕೂ ನಿಷೇಧ ಅನ್ವಯವಾಗುತ್ತದೆ.
ಮನವಿ ನೀಡುವ ಸಂದರ್ಭ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಸುವರ್ಣ ಬೊಳ್ಜೆ ಜಿಲ್ಲೆಯಲ್ಲಿರುವ ಅಕ್ರಮ ಕಸಾಯಿಖಾನೆ ಗೋವುಗಳ ಕಳ್ಳತನ ತಡೆಯುವಂತೆ ಮತ್ತುಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಆಸ್ಪದ ನೀಡಬಾರದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷರಾಗಿರುವ ಪ್ರಮೋದ್ ಶೆಟ್ಟಿ ಮಂದಾರ್ತಿ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ನ ನಗರಉಪಾಧ್ಯಕ್ಷರಾಗಿರುವ ಸುಧಾಕರ್ ಆಚಾರ್ಯ ನಗರ ಸಂಚಾಲಕರಾಗಿರುವ ಲೋಕೇಶ್ ಶೆಟ್ಟಿಗಾರ್ ಗ್ರಾಮಾಂತರ ಸಂಚಾಲಕ ಅನಿಲ್ ಆತ್ರಾಡಿ ಉಡುಪಿ ವಲಯ ಸಂಚಾಲಕರಾಗಿರುವ ಪ್ರವೀಣ್ ಪೂಜಾರಿ ಸಜೀತ್ ಪೆರ್ಡೂರು ಯುವರಾಜ್ ಪೆರ್ಡೂರು ಉಪಸ್ಥಿತರಿದ್ದರು