ವಾಮದಪದವು: ಶ್ರೀ ಗೌರಿ ಗಣೇಶೋತ್ಸವಕ್ಕೆ ಚಾಲನೆ

ಬಂಟ್ವಾಳ: ವಾಮದಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ. 1 ರಿಂದ ಸೆ. 3 ರವರೆಗೆ ವಾಮದಪದವು ಶ್ರೀ ಗಣೇಶ ಮಂದಿರದಲ್ಲಿ ಜರಗಲಿರುವ
36 ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವಕ್ಕೆ ರವಿವಾರ ಚಾಲನೆ ದೊರಕಿತು.

ಬೆಳಗ್ಗೆ ವಾಮದಪದವು ಪೇಟೆಯಿಂದ ಶ್ರೀ ಗಣೇಶ ಮಂದಿರದವರೆಗೆ ಶ್ರೀ ಗೌರಿ, ಶ್ರೀ ಗಣೇಶ ಮೂರ್ತಿಯನ್ನು ವಿವಿಧ ಚೆಂಡೆ, ವಾದ್ಯ, ಮೇಳಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ಧ್ವಜಾರೋಹಣ, ಶ್ರೀ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ. ವಿಶೇಷ ಗಣಹೋಮ, ಗೌರಿ ಪೂಜೆ ಮಹಾಪೂಜೆ, ಧಾರ್ಮಿಕ ಸಭೆ ನಡೆಯಿತು.

ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಕೋರ್ಲೋಡಿ, ಉಪಾಧ್ಯಕ್ಷ ಪ್ರಭಾಕರ ಪ್ರಭು ಆಲದಪದವು, ಕಾರ್ಯದರ್ಶಿ ದೇವೀಪ್ರಸಾದ್ ಶೆಟ್ಟಿ ಪಾಲೆದಮರ, ಕೋಶಾಽಕಾರಿ ಯಶೋಧರ ಸಫಲ್ಯ, ಪ್ರಮುಖರಾದ ಜಿ.ಕೆ. ಭಟ್, ಸುಲೋಚನಾ ಜಿ.ಕೆ. ಭಟ್, ಗೋಪಾಲಕೃಷ್ಣ ಚೌಟ,ಸುಬ್ಬಣ್ಣ ಶಾಸ್ತ್ರಿ, ಭಾಸ್ಕರ ಆಚಾರ್ಯ, ರಮೇಶ್ ಶೆಟ್ಟಿ ವಾಮದಪದವು, ಪುರುಷೋತ್ತಮ ಶೆಟ್ಟಿ ವಾಮದಪದವು,ಮೋಹನದಾಸ ಗಟ್ಟಿ, ಕೆ. ನಾಗರಾಜ್ ಶೆಟ್ಟಿ, ಕಮಲ್ ಶೆಟ್ಟಿ ಬೊಳ್ಳಾಜೆ, ಯಶಸ್ ರೈ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!