ಹೀರೆಕಾಯಿ ತಿನ್ನುವುದರಿಂದ ದೇಹದಲ್ಲಿ ಆಗುವ ಚಮತ್ಕಾರ ಏನು ಗೂತ್ತಾ.?
ಹೀರೆಕಾಯಿ ಅತ್ಯಧಿಕವಾಗಿ ಫೈಬರ್ ಹಾಗೂ ವಿಟಮಿನ್ ಸಿ ಜಿಂಕ್, ಐರನ್, ಮೆಗ್ನೀಷಿಯಂ, ಥೈಮಿನ್ ಹಾಗೂ ಇತರೆ ಮಿನರಲ್ ಗಳನ್ನು ಹೊಂದಿರುವ ಈ ಹಿರೇಕಾಯಿ ಹಲವು ರೋಗಗಳಿಗೆ ಅದ್ಭುತ ಮನೆಮದ್ದಾಗಿದೆ ಈ ತರಕಾರಿ ದೇಹದ ತೂಕ ಇಳಿಸುತ್ತದೆ.
ಹೀರೆಕಾಯಿಯಲ್ಲಿ ಹೇರಳವಾಗಿ ನೀರಿನಂಶ ಇರುವುದರಿಂದ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ,ಹೀರೆಕಾಯಿಯಲ್ಲಿ ಬೀಟಾ ಕೆರೋಟಿನ್ ಅಂಶವಿದ್ದು ಕಣ್ಣಿನ ದೃಷ್ಟಿಯನ್ನು ಆರೋಗ್ಯವಾಗಿಡುತ್ತೆ. ಮಾನವನ ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗಟ್ಟಿ ರಕ್ತವನ್ನು ಶುದ್ದಿ ಮಾಡುತ್ತದೆ.
ದೇಹದ ಚರ್ಮದಲ್ಲಿ ಬಿಳಿ ಸಿಬ್ಬುಗಳಾಗಿದ್ದರೆ ಹೀರೆಕಾಯಿ ಸಿಪ್ಪೆಯನ್ನು ಬೆಳ್ಳುಳ್ಳಿ ಜೊತೆಯಲ್ಲಿ ಅರೆದು ಸಿಬ್ಬುಗಳ ಮೇಲೆ ಲೇಪಿಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.
ನಿಮ್ಮ ತೂಕ ಕಳೆದುಕೊಳ್ಳಲು ಈ ಹಿರೇಕಾಯಿ ಸಹಾಯ ಮಾಡುತ್ತದೆ ಅಡುಗೆಯಲ್ಲಿ ಹಿರೇಕಾಯಿ ಬಳಸಿ, ಹಿರೇಕಾಯಿ ಪಲ್ಯ , ಹಿರೇಕಾಯಿ ಸಾಂಬಾರ ಮತ್ತು ಹಿರೇಕಾಯಿ ಜ್ಯೂಸ್ ಕುಡಿಯುವುದರಿಂದ ಬಹುಬೇಗನೆ ನಿಮ್ಮ ತೂಕ ಕಡಿಮೆಮಾಡಿಕೊಳ್ಳಬಹುದು.
ದೇಹದ ಮೂತ್ರ ವಿಸರ್ಜನೆಯಲ್ಲಿ ಉರಿ ಇದ್ದರೆ ಬಲಿತ ಹೀರೆಕಾಯಿಯ ಬೀಜವನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು, ಅದಕ್ಕೆ ಜೀರಿಗೆ ಪುಡಿ ಮತ್ತು ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಉರಿ ನಿವಾರಣೆಯಾಗುತ್ತದೆ.
ಸಿಪ್ಪೆ ಸಹಿತ ಹೀರೆಕಾಯಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಯನ್ನು ನೀರಿನೊಂದಿಗೆ ಕಲಸಿ ಕೂದಲಿಗೆ ಹಚ್ಚಿದರೆ ಬಾಲನೆರೆ ಕಡಿಮೆಯಾಗಿ, ಕೂದಲು ಸೊಂಪಾಗಿ ಬರುತ್ತದೆ.
ಒಂದು ಕಪ್ ಹೀರೆಕಾಯಿಯ ರಸಕ್ಕೆ ಎರಡು ಚಮಚ ಸಕ್ಕರೆ ಸೇರಿಸಿ ಸೇವಿಸಿದರೆ ಕಾಮಾಲೆ ನಿವಾರಣೆ ಯಾಗುತ್ತದೆ.