ಹುಟ್ಟು ಹಬ್ಬ ಆಚರಿಸದಿರಲು:ಉಪ್ಪಿ ಮನವಿ
ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಸಂಪ್ರದಾಯದಂತೆ ಅಭಿಮಾನಿಗಳು ಉಪ್ಪಿ ಮನೆ ಬಳಿ ಬಂದು, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಈ ಸಂಪ್ರದಾಯಕ್ಕೆ ಉಪೇಂದ್ರ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬ ಆಚರಣೆಯಲ್ಲಿ ಆಡಂಬರ, ಅದ್ಧೂರಿತನಕ್ಕಿಂತ ಉತ್ತಮ ಸಂದೇಶ ಮುಖ್ಯ ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ…
ಸೆಪ್ಟೆಂಬರ್ 18 “ಅಭಿಮಾನಿಗಳ ದಿನ”, ಅಂದು ದಯವಿಟ್ಟು ತಾವುಗಳು ಯಾರೂ ಕೇಕ್, ಹೂವಿನ ಹಾರ ಹೂಗುಚ್ಛ ಮತ್ತು ಉಡುಗೊರೆಗಳನ್ನು ತರಬೇಡಿ.. ತರಲೇ ಬೇಕು ಎಂದೆನಿಸಿದರೆ ಗಿಡಗಳನ್ನು ತನ್ನಿ. ಮುಂದೆ ಅದನ್ನು ಪೋಷಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ…
-ನಿಮ್ಮ ಉಪೇಂದ್ರ