ಉಡುಪಿ-ದ.ಕ.: “ಉನ್ನತಿ ಉದ್ಯೋಗ ಮೇಳ 2020” ಮುಂದೂಡಿಕೆ

ಉಡುಪಿ – ಸಂಚಲನ ಸ್ವಯಂಸೇವಾ ಸಂಘಟನೆಯ ಆಶ್ರಯದಲ್ಲಿ, ಉನ್ನತಿ ಕ್ಯಾರಿಯರ್ ಅಕಾಡೆಮಿ ಪ್ರಾಯೋಜಕತ್ವದಲ್ಲಿ, ಮಂಗಳೂರು ವಿಶ್ವ ವಿದ್ಯಾನಿಲಯದ ಸಹಯೋಗದೊಂದಿಗೆ “ಉನ್ನತಿ ಉದ್ಯೋಗ ಮೇಳ 2020″ನ್ನು ಇದೀಗ ಏಪ್ರಿಲ್ 3ಕ್ಕೆ ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರ. ದ.ಕಾಲೇಜು, ಅಜ್ಜರಕಾಡು ಮತ್ತು ಏಪ್ರಿಲ್4ಕ್ಕೆ ಮಂಗಳೂರು ನಗರ ಹಂಪನಕಟ್ಟದಲ್ಲಿರುವ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ನಡೆಸಲಾಗುವುದು. ಈ ಹಿಂದೆ ನಿಗದಿಯಾಗಿದ್ದ ಮಾರ್ಚ್ 20 ಮತ್ತು 21ರ ಈ ಕಾರ್ಯಕ್ರಮವನ್ನು ಕೊರೋನ ನಿರ್ಬಂಧನೆಯ ಹಿನ್ನಲೆಯಲ್ಲಿ ಮುಂದೂಡಲಾಗಿದೆ.

ಈ ಮೇಳದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ 18ರಿಂದ 40 ವರ್ಷದ ಯುವಕ ಯುವತಿಯರು ಆನ್ ಲೈನ್ ಮೂಲಕ ನೋಂದಣಿ ಮಾಡಿ ಮೇಳದಲ್ಲಿ 2 ದಿನವೂ ಪ್ರತ್ಯೇಕ ಟೋಕನ್ ಗಳನ್ನು ಪಡೆದು ಭಾಗವಹಿಸಬಹುದು.

ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚಿನ ವಿವಿಧ ಕಂಪೆನಿಗಳು ಭಾಗವಹಿಸಿ ಅಭ್ಯರ್ಥಿಗಳಿಗೆ ಉದ್ಯೋಗವಕಾಶವನ್ನು ಒದಗಿಸಲಿವೆ.

ಅಭ್ಯರ್ಥಿಗಳ ತರಬೇತಿ ಶಿಬಿರ
ಈಗಾಗಲೇ ನೋಂದಣಿಗೊಂಡಿರುವ ಅಭ್ಯರ್ಥಿಗಳಿಗೆ ಹಾಗೂ ನೋಂದಣಿಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಂದರ್ಶನ ಎದುರಿಸುವ ಬಗ್ಗೆ 1 ದಿನದ “ತರಬೇತಿ ಶಿಬಿರ”ವನ್ನು ಮಾರ್ಚ್ 30ರಂದು ಉಡುಪಿ ಟೌನ್ ಹಾಲ್ ನಲ್ಲಿ, 31ರಂದು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟದಲ್ಲಿ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಸಂವಹನ ಕಲೆ, ಸಂದರ್ಶನಕ್ಕೆ ಬೇಕಾಗುವ ತಯಾರಿ ಇತ್ಯಾದಿ ಉಪಯುಕ್ತ ಮಾಹಿತಿಗಳನ್ನು ಉನ್ನತಿ ಕ್ಯಾರಿಯರ್ ಅಕಾಡೆಮಿಯ ನುರಿತ ತಜ್ಞರು ನಡೆಸಿಕೊಡಲಿದ್ದಾರೆ.

ಇದೀಗ ಉಡುಪಿ, ದ.ಕ.ಜಿಲ್ಲೆಗಳ CSC ಸೆಂಟರ್ ಗಳಲ್ಲೂ ನೋಂದಣಿಗೆ ಅವಕಾಶ

ಇನ್ನೂ ನೋಂದಣಿಗೊಳ್ಳದ ಅಭ್ಯರ್ಥಿಗಳಿಗಾಗಿ ಇದೀಗ ತಮ್ಮ ಹತ್ತಿರದ CSC ಸೆಂಟರ್ ಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಉಡುಪಿಯ ಸುಮಾರು 30ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ಹಾಗೂ ದ.ಕ.ಜಿಲ್ಲೆಯ ಸುಮಾರು 40ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಸೆಂಟರ್ ಗಳಿಗೆ ಭೇಟಿ ಕೊಟ್ಟು ನೋಂದಣಿ ಪ್ರಕ್ರಿಯೆಯನ್ನು ಮಾಡಬಹುದು.

ನೇರವಾಗಿ ನೋಂದಣಿ ಮಾಡುವವರಿಗೆ ಈಗಾಗಲೇ www.unnathijobs.com ಮೂಲಕ ಆನ್ ಲೈನ್ ನೋಂದಣಿ ಪ್ರಾರಂಭಗೊಂಡಿದೆ.

ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ಉದ್ಯೋಗವಕಾಶದ ಪ್ರಯೋಜನ ಪಡೆದುಕೊಳ್ಳುವಂತೆ ಸಂಚಲನ ಸಂಸ್ಥೆಯ ಅಧ್ಯಕ್ಷರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!