ಸಸ್ಯೋತ್ಸವದ ಜೊತೆಗೆ ಮಗುವಿನ ನಾಮಕರಣೋತ್ಸ

ಸಂಭ್ರಮದ ನಡುವೆಯೇ ಸಂಕಲ್ಪ ತೊಡುವ ಒಂದು ವಿಶಿಷ್ಟ ಕಾರ್ಯಕ್ರಮ ಮಟ್ಟುವಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಪ್ರಸಿದ್ಧ ವಿದ್ವಾಂಸ ಜ್ಯೋತಿಷಿ ಮಟ್ಟು ಪ್ರವೀಣ ಹಾಗೂ ಹರಿಣಿ ತಂತ್ರಿಗಳು ತಮ್ಮ ಪುಟ್ಟ ಗಂಡು ಮಗು(ಶ್ರೀಹರಿ)ವಿನ ನಾಮಕರಣೋತ್ಸವದ ಸಂಭ್ರಮದ ನಡುವೆಯೇ ಆಗಮಿಸಿದ ಬಂಧು ಬಳಗದವರಿಗೆ ಪ್ರಕೃತಿ ರಕ್ಷಣೆಗೆ ಮುಂದಾಗುವ ಸಂಕಲ್ಪ ತೊಡುವ ಪ್ರೇರಣೆ ನೀಡುವ ಉತ್ತಮ ಕಾರ್ಯಕ್ರಮ ನಡೆಸಿದರು.

ಆಗಮಿಸಿದ ನೂರಾರು ಮಂದಿಗೆ ಉತ್ತಮ ತಳಿಯ ಹೂ , ಹಣ್ಣು ಹಾಗೂ ಔಷಧೀಯ ಸಸ್ಯಗಳನ್ನು ವಿತರಿಸಿ ನೆಟ್ಟು ಪೋಷಿಸುವಂತೆ ವಿನಂತಿಸಿದರು. ಕಾರ್ಯಕ್ರಮಕ್ಕೆ ಬಂದವರೂ ಸಂತೋಷದಿಂದಲೇ ಸಸಿಗಳನ್ನು ಕೊಂಡೊಯ್ದರು, ಹತ್ತಾರು ಬಗೆಯ 600 ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು,

ದೇವಸ್ಥಾನದ ಆವರಣದಲ್ಲೂ ಅಶ್ವತ್ಥ ,ನೆಲ್ಲಿ, ಶಮೀ, ತೆಂಗು ಸಸಿಗಳನ್ನು ಪ್ರವೀಣ ತಂತ್ರಿಗಳು ನೆಟ್ಟರು. ಮಗುವಿನ ನಾಮಕರಣೋತ್ಸವವನ್ನು ಸಸ್ಯೋತ್ಸವವನ್ನಾಗಿ ಸ್ಮರಣೀಯವಾಗಿಸಿದ ಸಂತೋಷದಲ್ಲಿ ಹರಿಣಿ ಪ್ರವೀಣ ತಂತ್ರಿ ದಂಪತಿ ಸಂಭ್ರಮಿಸಿದರು.*

ಪ್ರವೀಣ ತಂತ್ರಿಗಳ , ದೇವಳದ ಆಡಳಿತ ಮೊಕ್ತೇಸರ ಮಟ್ಟು ಲಕ್ಷ್ಮೀನಾರಾಯಣ ರಾವ್.,ವಾಸುದೇವ ಭಟ್ ಪೆರಂಪಳ್ಳಿ , ಕರ್ನಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ರಾಘವೇಂದ್ರಭಟ್ , ಪತ್ರಕರ್ತ ಜನಾರ್ದನ ಕೊಡವೂರು , ಅಹಲ್ಯಾ ತಂತ್ರಿ , ಶ್ರೀಶ ಭಟ್ ಮೊದಲಾದವರು ಉಪಸ್ಥಿತರಿದ್ದು, ಕಾರ್‍ಯಕ್ರಮಕ್ಕೆ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!