ಉದ್ಯಾವರ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ : ಉಚಿತ ಆರೋಗ್ಯ ಶಿಬಿರಗಳ ಮುಖಾಂತರ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳ ಮುಖಾಂತರ ಹಲವಾರು ಜನರಿಗೆ ಉಪಕಾರವಾಗುತ್ತದೆ ಎಂದು ಗಣೇಶ ದುರ್ಗಾ ಚಾರಿಟೆಬಲ್ ಟ್ರಸ್ಟ್ನ ತೇಜೇಶ್ವರ ರಾವ್ ಹೇಳಿದರು.

ಉದ್ಯಾವರ ಸೌಂದರ್ಯ ಸಭಾ ಭವನದಲ್ಲಿ ಇಂಡಿಯನ್ ಸೀನಿಯರ್ ಚೇಂಬರ್, ಉಡುಪಿ ಟೆಂಪಲ್ ಸಿಟಿ ಲಿಜನ್ ವತಿಯಿಂದ ಜೇಸಿಐ ಉದ್ಯಾವರ ಕುತ್ಪಾಡಿ, ಲಯನ್ಸ್ ಕ್ಲಬ್ ಉದ್ಯಾವರ,  ಗಣೇಶ ದುರ್ಗಾ ಚಾರಿಟೆಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸಮುದಾಯ ಆರೋಗ್ಯ ವಿಭಾಗ ಕೆಎಂಸಿ ಮಣಿಪಾಲ ಸಹಯೋಗದಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂಡಿಯನ್ ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೆಜನ್ ಅಧ್ಯಕ್ಷ ವಿಜಯ ಕುಮಾರ್ ಉದ್ಯಾವರ ಮಾತನಾಡಿ, ಆರೋಗ್ಯ ಜಾಗೃತಿ ಮೂಡಿಸುವಂತಹ ಇನ್ನಷ್ಟು ಕಾರ್ಯ ಕಾರ್ಯಕ್ರಮ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಜೇಸಿಐ ಕಾರ್ಯನಿರ್ವಹಿಸಲಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೀನಿಯರ್ ಚೇಂಬರ್ ನ ರಾಷ್ಟ್ರೀಯ ನಿರ್ದೇಶಕಿ ಮಂಜುಳಾ ಪ್ರಸಾದ್, ಮಣಿಪಾಲ ಕೆ.ಎಂ.ಸಿ. ಸಮುದಾಯ ಆರೋಗ್ಯ ವಿಭಾಗದ ಡಾ. ಈಶ್ವರಿ, ಜೇಸಿಐ ಉದ್ಯಾವರ ಕುತ್ಪಾಡಿ ಅಧ್ಯಕ್ಷ ರಾಘವೇಂದ್ರ, ಉಡುಪಿ ಟೆಂಪಲ್ ಸಿಟಿ ಲೀಜನ್ ನಿಕಟಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಾರ್ಜ್ ಸಾಮುವೇಲ್,  ಕಾರ್ಯಕ್ರಮ ನಿರ್ದೇಶಕ ಶಂಕರ್ ಪೂಜಾರಿ  ಉಪಸ್ಥಿತರಿದ್ದರು.

ಉದ್ಯಾವರ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರತಾಪ್ ಕುಮಾರ್ ಪ್ರಸ್ತಾವನೆಗೈದರೆ, ಉಡುಪಿ ಟೆಂಪಲ್ ಸಿಟಿ ಲೀಜನ್ ಕಾರ್ಯದರ್ಶಿ ಪ್ರಮೋದ್ ವಂದಿಸಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ತೊಂದರೆಗಳು, ಸ್ತ್ರೀರೋಗ ಸಂಬಂಧಿ ತೊಂದರೆಗಳು ಹಾಗೂ ಎಲ್ಲ ಕಾಯಿಲೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಉದ್ಯಾವರ ಗ್ರಾಮದ ಆಸುಪಾಸಿನ 100 ಕ್ಕೂ ಅಧಿಕ ಸಾರ್ವಜನಿಕರು ಇದರ ಉಪಯೋಗವನ್ನು ಪಡೆದರು.

Leave a Reply

Your email address will not be published. Required fields are marked *

error: Content is protected !!