ಕಾರ್ಕಳ: ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ವ್ಯಕ್ತಿಗೆ 1.67 ಲ.ರೂ. ವಂಚನೆ
ಕಾರ್ಕಳ ಎ.17(ಉಡುಪಿ ಟೈಮ್ಸ್ ವರದಿ): ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ 1.67 ಲಕ್ಷ ರೂ. ವಂಚಿಸಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳದ ಕಸಬಾ ಗ್ರಾಮದ ಮೂರ್ತಿ ಕೆ,ಆರ್ ಎಂಬವರು ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದ Indus lnd Bank ಇದರ ಕೆಡ್ರಿಟ್ ಕಾರ್ಡ್ ಸುಮಾರು 1 ತಿಂಗಳ ಹಿಂದೆ ಬಂದಿದ್ದು, ಆಕ್ಟಿವ್ ಮಾಡಿರುವುದಿಲ್ಲ. ಈ ನಡುವೆ ಎ.15 ರಂದು ಮನೆಯಲ್ಲಿ ಇರುವಾಗ ಮಧ್ಯಾಹ್ನದ ವೇಳೆ ಅಪರಿಚಿತ ನಂಬರ್‍ನಿಂದ ಕರೆ ಮಾಡಿದ ವ್ಯಕ್ತಿ ಕಾರ್ಡನ್ನುಆಕ್ಟಿವ್ ಮಾಡಿ ಎಂದು ತಿಳಿಸಿದ್ದ. ಹಾಗೂ ಮೊಬೈಲ್‍ಗೆ “Indptrsin.in” ಲಿಂಕ್ ಕಳುಹಿಸಿದ್ದನು. ಇದನ್ನು ನಂಬಿದ ಮೂರ್ತಿ ಅವರು ಕಾರ್ಡನ್ನುಆಕ್ಟಿವ್ ಮಾಡಲು ಲಿಂಕ್‍ನ್ನು ಓಪನ್ ಮಾಡಿದ್ದು, ಅಗ ಒಟಿಪಿ ಜೊತೆಗೆ ಕ್ರೆಡಿಟ್ ಕಾರ್ಡ ನಿಂದ 1,67,657/- ರೂ ಹಣ ಕಡಿತವಾದ ಬಗ್ಗೆ ಮೆಸೇಜ್ ಬಂದಿರುತ್ತದೆ. ಈ ವೇಳೆ ತಾವು ಮೋಸ ಹೋಗಿರುವುದು ಅರಿವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.