ಉಡುಪಿ: ಪೊಲೀಸ್ ಇನ್ಸ್ ಪೆಕ್ಟರ್ ಶೇಖರ್ ಸೇರಿಗಾರ್ ನಿಧನ
ಉಡುಪಿ: ನಕ್ಸಲ್ ನಿಗ್ರಹ ಪಡೆಯ ಆಗುಂಬೆ ಕ್ಯಾಂಪ್ ನಲ್ಲಿ ಇನ್ಸ್ ಪೆಕ್ಟರ್ ಆಗಿರುವ ಕಾರ್ಕಳ ತಾಲ್ಲೂಕು ಕಡ್ತಲ ಗ್ರಾಮದ ಎಳ್ಳಾರೆ ಶೇಖರ್ ಸೇರಿಗಾರ್ (58) ಶನಿವಾರ ಅನಾರೋಗ್ಯದಿಂದ ನಿಧನರಾದರು.
16 ವರ್ಷಗಳ ಕಾಲ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವಲ್ಪ ಸಮಯ ಎಳ್ಳಾರೆಯಲ್ಲಿ ಜನಸೇವೆಯಲ್ಲಿ ತೊಡಗಿದ್ದರು. ಬಳಿಕ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡು ಅಮಾಸೆಬೈಲ್, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಮತ್ತು ಪೊಲೀಸ್ ಅರಣ್ಯ ಸಂಚಾರಿದಳದಲ್ಲಿಯೂ ಸೇವೆಸಲ್ಲಿಸಿ ಇತ್ತೀಚೆಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಪದೋನ್ನತಿ ಹೊಂದಿ ನಕ್ಸಲ್ ನಿಗ್ರಹ ಪಡೆಯ ಆಗುಂಬೆ ಕ್ಯಾಂಪ್ ನಲ್ಲಿ ಸೇವೆಸಲ್ಲಿಸುತ್ತಿದ್ದರು. ಎಳ್ಳಾರೆ ಚಂದಯ್ಯ ಸೇರಿಗಾರ್ ಮತ್ತು ಗುಲಾಬಿ ಸೇರಿಗಾರ್ ಅವರ ಪ್ರಥಮ ಪುತ್ರ. ಹೆಬ್ರಿ ತಾಲ್ಲೂಕಿನ ಮುನಿಯಾಲು ಮುದೆಲ್ಕಡಿಯಲ್ಲಿ ನೆಲೆಸಿದ್ದರು. ಮೃತರಿಗೆ ಪತ್ನಿ ,ಒಂದು ಗಂಡು ಒಂದು ಹೆಣ್ಣು ಮಕ್ಕಳು ಇದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಕಾರ್ಕಳದ ಮುನಿಯಾಲು ಎಂಬಲ್ಲಿ ನಡೆಯಲಿದೆಂದು ಎ.ಎನ್.ಎಫ್ ನ ಪೊಲೀಸ್ ಉಪಾಧೀಕ್ಷಕರಾದ ಜೈಶಂಕರ್ ತಿಳಿಸಿದ್ದಾರೆ.