ಉಡುಪಿ: ಸಂತೆಕಟ್ಟೆಯಲ್ಲಿ ಭೀಕರ ಅಪಘಾತ- ಎಎಸ್ಐ ಹಾಗೂ ಪುತ್ರಿ ದಾರುಣ ಸಾವು
ಉಡುಪಿ :ಇಂದು ಮುಂಜಾನೆ ಸಂತೆಕಟ್ಟೆಯಲ್ಲಿ ನಡೆದ ಭೀಕರ ಅಪಘಾತಕ್ಕೆ ಕರಾವಳಿ ಕಾವಲು ಪಡೆಯ ಎಎಸ್ಐ ಹಾಗೂ ಅವರ ಪುತ್ರಿ ಮೃತಪಟ್ಟ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಉಡುಪಿಗೆ ಬಸ್ ನಲ್ಲಿ ಬಂದಿದ್ದ ಮಗಳನ್ನು ಕರೆದುಕೊಂಡು ಬರಲು ಹೋದ ಕರಾವಳಿ ಕಾವಲು ಪಡೆಯ ಗಣೇಶ ಪೈ(58) ಹಾಗೂ ಅವರ ಮಗಳು ಗಾಯತ್ರಿ ಪೈ (28) ಮೃತ ದುರ್ದೈವಿಗಳು.
ಗಣೇಶ್ ಪೈ ಅವರು ಹುಬ್ಬಳಿಯಿಂದ ಆಗಮಿಸಿದ್ದ ತನ್ನ ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡ ಹೋಗಲು ಸ್ಕೂಟರ್ ನಲ್ಲಿ ಬಂದಿದ್ದು, ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದಾಗ ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಬಸ್ಸು ಡಿಕ್ಕಿಹೊಡೆದಿದ್ದು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಗಣೇಶ್ ಪೈ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗಿದೆ.