ಪಿಎಸ್ಸೈ ನೇಮಕಾತಿ ಪರಿಕ್ಷೆ ಹಗರಣಕ್ಕೆ ಗೃಹಮಂತ್ರಿ ಆರಗ ಜ್ಞಾನೇಂದ್ರ ನೇರ ಹೊಣೆಗಾರರು- ಡಿಕೆಶಿ

ಚಿಕ್ಕಮಗಳೂರು, ಎ.25: ಪಿಎಸ್ಸೈ ನೇಮಕಾತಿ ಪರಿಕ್ಷೆ ಹಗರಣಕ್ಕೆ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೇ ನೇರ ಹೊಣೆಗಾರರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆರೋಪಿಸಿದ್ದಾರೆ.

 ಚಿಕ್ಕಮಗಳೂರಿನ ಕೊಪ್ಪದ ಹರಿಹರಪುರದಲ್ಲಿ ಮಾತನಾಡಿದ ಅವರು, ಇಡೀ ಸರಕಾರ ಭ್ರಷ್ಟಚಾರದಲ್ಲಿ ಮುಳುಗಿದೆ. ಪ್ರತೀ ಕೆಲಸದಲ್ಲೂ 40% ಕಮೀಶನ್ ದಂಧೆ ನಡೆಯುತ್ತಿದೆ.ಅಶ್ವಥ್ ನಾರಾಯಣ್, ಯೋಗಿಶ್ವರ್ ಸೇರಿದಂತೆ ಅನೇಕ ಶಾಸಕರು ತಮ್ಮ ಮನೆಗೆ ಹಣ ತಂದು ಕೊಟ್ಟರು ಎಂದು ಅಸೆಂಬ್ಲಿಯಲ್ಲೇ ಹೇಳಿದ್ದಾರೆ. ಅಧೀವೇಶನದಲ್ಲಿ ಗೃಹಮಂತ್ರಿಗಳು ನಾನೇನು ಮಾಡಿಲ್ಲ ಎಂದು ಹೇಳಿ ನಂತರ ಹಗರಣವನ್ನು ಸಿಓಡಿ ತನಿಖೆಗೆ ನೀಡಿದ್ದೇಕೆ? ಇದಕ್ಕೆ ಗೃಹ ಸಚಿವರೇ ಜವಬ್ದಾರರು ಎಂದರು.

ಪಿಎಸ್ಸೈ ನೇಮಕಾತಿ ಅಕ್ರಮಕ್ಕೂ ಕಾಂಗ್ರೆಸ್‍ಗೂ ಏನು ಸಂಬಂಧ, ರಾಜ್ಯದಲ್ಲಿರುವುದು ಬಿಜೆಪಿ ಸರಕಾರ ಅಲ್ಲವೇ? ಎಂದು ಪ್ರಶ್ನಿಸಿದ‌ ಅವರು,‌ ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮವನ್ನು ಹೊರ ತೆಗೆದು ಜನರ ಗಮನಕ್ಕೆ ತಂದಿದ್ದೇ ಕಾಂಗ್ರೆಸ್. ಈ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇದು ರಾಜ್ಯ ಸರಕಾರದ ಆಡಳಿತ ವೈಫಲ್ಯ ಎಂದ ಅವರು,  ಪ್ರಕರಣದಲ್ಲಿ ಯಾರೋ ಗನ್‍ ಮ್ಯಾನ್ ಇದ್ದ, ಮಾಜಿ ಬ್ಲಾಕ್ ಅಧ್ಯಕ್ಷ, ಇನ್ನೊಬ್ಬ ಎನ್ನುವುದಲ್ಲ. ಇದು ರಾಜ್ಯ ಸರಕಾರದ ಆಡಳಿತ ವೈಫಲ್ಯ. ಸರಕಾರದ ಅವ್ಯವಹಾರಗಳು ಒಂದೊಂದಾಗಿ ಹೊರ ಬರುತ್ತಿವೆ. ನೇಮಕಾತಿಯಲ್ಲಿ ಅವ್ಯವಹಾರ ನಡೆಸಿರುವುದು ಎಷ್ಟು ಸರಿ. ಬಿಜೆಪಿ ಇದನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!