ಆಲ್‍ಖೈದಾ ವಿಡಿಯೋ ಆರ್ ಎಸ್‍ ಎಸ್ ನವರು ಮಾಡಿದ್ದಾರೆ ಸಿದ್ಧರಾಮಯ್ಯ ಹೇಳಿಕೆ ಹಾಸ್ಯಾಸ್ಪದ- ಪ್ರಕಾಶ್ ಕುಕ್ಕೆಹಳ್ಳಿ

ಉಡುಪಿ ಎ.7 (ಉಡುಪಿ ಟೈಮ್ಸ್ ವರದಿ) : ಹಿಜಾಬ್ ಹೋರಾಟವನ್ನು ಬೆಂಬಲಿಸಿ ಆಲ್‍ಖೈದಾ ಮುಖ್ಯಸ್ಥನೋರ್ವ ಬಿಡುಗಡೆ ಮಾಡಿರುವ ವಿಡಿಯೋ ಆರ್.ಎಸ್‍.ಎಸ್ ನವರು ಮಾಡಿದ್ದಾರೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದ್ದಾರೆ.

 ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ಅವರು ಅವರ ಮನಸ್ಥಿತಿ, ಮಾನಸಿಕತೆಗೆ ತಕ್ಕಂತೆ ಮಾತನಾಡುತ್ತಾರೆ. ಇವತ್ತು ವಿಡಿಯೋ ಸಂಘಪರಿವಾರದ ಸೃಷ್ಠಿ ಅಂತಾರೆ. ನಾಳೆ ಆಲ್‍ಖೈದ ಮುಖ್ಯಸ್ಥನನ್ನೇ ಆರ್.ಎಸ್‍.ಎಸ್ ಸ್ವಯಂ ಸೇವಕ ಅಂತಾರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿಲ್ಲ. ಎಲ್ಲಿಯದೋ ಆಲ್‍ಖೈದ ಮುಖ್ಯಸ್ಥನ ವಿಡಿಯೋವನ್ನು ಆರ್.ಎಸ್‍.ಎಸ್ ನವರು ಮಾಡುತ್ತಾರೆ ಎಂದರೆ ಇದಕ್ಕಿಂತ ದೊಡ್ಡ ಹಾಸ್ಯಾಸ್ಪದ ಮತ್ತೇನಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಹಿಂದೂ ಸಮಾಜ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದ ಅವರು, ಸಿದ್ಧರಾಮಯ್ಯನವರು ಯಾವತ್ತೂ ಹಿಂದೂ ಸಮಾಜದ ಪರವಾಗಿ ನಿಂತವರೇ ಅಲ್ಲ. ಜೀವನ ಪೂರ್ತಿ ಮುಸಲ್ಮಾನ ತುಷ್ಟೀಕರಣ ಹಿಂದು ವಿರೋಧಿ ನೀತಿಯನ್ನೇ ಅನುಸರಿಸಿಕೊಂಡು ಬಂದವರು ಹಾಗಾಗಿ ಸಮಾಜ ಅವರ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ. ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಅವರ ನಾಲಿಗೆ ಮತ್ತು ಮೆದುಳಿಗೆ ಕನೆಕ್ಷನ್ ಇಲ್ಲ ಎಂದು ಸಿದ್ಧರಾಮಯ್ಯ ಅಂತಾರೆ, ಆದರೆ ಅವರ ಈ ಹೇಳಿಕೆ ಈಗ ಈಶ್ವರಪ್ಪನವರಿಗೂ ಅಥವಾ ಅವರಿಗೇ ಅನ್ವಯವಾಗುತ್ತದೆಯೋ ಎನ್ನುವುದನ್ನು ನಾವು ಯೋಚನೆ ಮಾಬೇಕಾಗಿದೆ ಎಂದರು. ಹಾಗೂ ಇದೇ ವೇಳೆ ಸಿಎಂ ಇಬ್ರಾಹಿಂ ಓರ್ವ ಕಾಮಿಡಿ ಪೀಸ್ ಅವರ ಮಾತುಗಳನ್ನು ನಾವು ತಮಾಷೆಯಾಗಿಯೇ ತೆಗೆದುಕೊಳ್ಳಬೇಕು ಬಿಟ್ಟರೆ ಅದೇನು ಗಂಭೀರವಾದ ವಿಷಯವೇನಲ್ಲ ಎಂದು ವ್ಯಂಗ್ಯವಾಡಿದರು.

Leave a Reply

Your email address will not be published. Required fields are marked *

error: Content is protected !!