ಉಡುಪಿ: ಸುಭಾಸ್ ನಗರದ 6 ಕಾಲೋನಿ ಸಿಲ್ ಡೌನ್
ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಚ ಭಾರತ್ ಮಿಷನ್‌ನ 31 ವರ್ಷದ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢವಾಗುತ್ತಿದ್ದಂತೆ ಆತನ ಮನೆಯಾದ ಸರಕಾರಿಗುಡ್ಡೆಯ ಆರು ಕಾಲೋನಿಗಳನ್ನು ಸಿಲ್ ಡೌನ್ ಮಾಡಲಾಗಿದೆ.
ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಭಾಸ್ ನಗರದ ಸರಕಾರಿಗುಡ್ಡೆಯ 1ನೇ ಕ್ರಾಸ್‌ನಿಂದ 6 ನೇ ಕ್ರಾಸ್‌ವರೆಗಿನ 200ಕ್ಕೂ ಹೆಚ್ಚೂ ಮನೆಗಳಿರುವ ಪ್ರದೇಶಗಳನ್ನು ಸಿಲ್ ಡೌನ್ ಮಾಡಲಾಗಿದೆ.
ಜಿಪಂ ಹೊರಗುತ್ತಿಗೆ ನೌಕರನೋರ್ವನಿಗೆ ಸೋಮವಾರ ಕೋರೊನಾ ಪಾಸಿಟಿವ್ ದೃಢವಾಗಿದ ಈ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್ ಕಚೇರಿಯನ್ನು ಮುಚ್ಚಲಾಗುವುದು. ಜಿ.ಪಂ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ಬಳಿಕ ಮತ್ತೆ ಕಾರ್ಯಾಚರಣೆ ಮಾಡಲಾಗುವುದು ಎಂದು ಸಿಇಒ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿ ಮೇ 19ಕ್ಕೆ ಕೊನೆಯಬಾರಿ ಕಚೇರಿಗೆ ಬಂದಿದ್ದು, ಕಚೇರಿಗೆ ಬಂದಾಗ ಆತನಲ್ಲಿ ಶೀತ ಮತ್ತು ಕೆಮ್ಮಿನ ಲಕ್ಷಣಗಳಿತ್ತು ಸೋಂಕಿನ ಲಕ್ಷಣಗಳಿದ್ದ ಕಾರಣ ಆತನ ಗಂಟಲ ಸ್ವಾಬ್ ತೆಗೆಯಲು ಕಳುಹಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಕಳೆದ ಐದು ದಿನಗಳಲ್ಲಿ ಅನೇಕ ಬಾರಿ ಜಿಪಂ ಕಚೇರಿ ಸ್ಯಾನಟೈಸ್ ಮಾಡಲಾಗಿದೆ. ಮಂಗಳವಾರ ಮತ್ತೊಮ್ಮೆ ಜಿಪಂ ಕಚೇರಿ ಸ್ಯಾನಿಟೈಸರ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
Good luck. God bless you and your team.