ಜಯಲಕ್ಷ್ಮಿ ಸಿಲ್ಕ್ ನಲ್ಲಿ ದೀಪಾವಳಿ ಬಿಗ್ ಆಫರ್: ಉಡುಪುಗಳ ಮೇಲೆ 15 % ರಿಯಾಯಿತಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಕರಾವಳಿ ಕರ್ನಾಟಕದ ಅತಿ ದೊಡ್ಡ ಜವಳಿ ಮಳಿಗೆ ಜಯಲಕ್ಷ್ಮಿ ಸಿಲ್ಕ್ ನಲ್ಲಿ ದೀಪಗಳ ಹಬ್ಬಕ್ಕೆ ಉಡುಗೊರೆಯಾಗಿ ಗ್ರಾಹಕರಿಗೆ ಉಡುಪುಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ, 50 ವರ್ಷಗಳಿಂದ ಸುದೀರ್ಘ ಜನರ ಪ್ರೀತಿಗೆ ಪಾತ್ರವಾದ ಜಯಲಕ್ಸ್ಮಿ ಸಿಲ್ಕ್ ನಲ್ಲಿ ಉಡುಪುಗಳ ಮೇಲೆ 15 % ರಿಯಾಯಿತಿ ದೊರೆಯಲಿದೆ. ಗ್ರಾಹಕರ ಕೈಗೆಟುಕುವ ದರದಲ್ಲಿ ಮನಗೊಪ್ಪುವ ಬಟ್ಟೆಗಳ ಹೇರಳ ಸಂಗ್ರಹ
ಉತ್ಕ್ರಷ್ಟ ಕಂಪೆನಿಯ ಉಡುಪುಗಳ ವಿಫುಲ ಸಂಗ್ರಹ
ಇಲ್ಲಿ ಜೆ ಹ್ಯಾಂಪ್ ಸ್ಟಡ್, ಬ್ಲಾಕ್ ಬೇರಿಸ್, ವ್ಯಾನ್ ಹುಸೇನ್, ಲೂವಿಸ್ ಫಿಲಿಪ್,ಅಪೊಲೊ, ಫಾಲೋ ಅಪ್, ಪಾರ್ಕ್ ಅವೆನ್ಯೂ, ರೈಟ್ ವ್ಯಾಲ್ಯೂ, ಆಕ್ಸಾಂ ಬರ್ಗ್, ಅಪಾಲನ್ ,ಪೋಲೊ,ಮೂಡೋ ಜೀನ್ಸ್, ಗ್ಯಾಲಕ್ಸಿ, ಹಾಗು ಇನ್ನು ಅನೇಕ ಕಂಪನಿಗಳ ಪುರುಷರ ಉಡುಪುಗಳ ವಿಫುಲ ಸಂಗ್ರಹವಿದೆ.
ಹಬ್ಬ ಹರಿದಿನಗಳ ಪ್ರಯುಕ್ತ ವಿಶೇಷವಾಗಿ ತಯಾರಿಸಲಾದ ಕಾಂಜೀವರಂ, ಧರ್ಮಾವರಂ, ಲೆನಿನ್, ಜಾರ್ಜೆಟ್ ,ಸೌತ್ ಸಿಲ್ಕ್ ಟಸ್ಸೆರ್ ಸಿಲ್ಕ್ ಮುಂತಾದ ಸಿಲ್ಸ್ ಮತ್ತುಫ್ಯಾನ್ಸಿ ಸಾರಿಗಳ ಬೃಹತ್ ನೂತನ ಸಂಗ್ರಹವಿದ್ದು, ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಮಳಿಗೆಯ ಪ್ರತಿದಿನ ಬೆಳಗ್ಗೆ 9 ರಿಂದ ರಾತ್ರಿ 8ರ ತನಕ ಮಾತ್ರ ತೆರೆದಿರುತ್ತದೆ. ಪ್ರತೀ ಮಂಗಳವಾರ ಮಧ್ಯಾಹ್ನ 2 ಗಂಟೆಯ ನಂತರ ರಜೆ ಇದ್ದು ರವಿವಾರ ಮಳಿಗೆ ತೆರೆದಿರುತ್ತದೆ.
ಕೋವಿಡ್-19 ರ ಲಾಕ್ ಡೌನ್ ಇದೀಗ ತೆರವುಗೊಂಡಿದ್ದ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರದ ಎಲ್ಲಾ ನಿಯಮಗಳನ್ನು ಮಳಿಗೆಯಲ್ಲಿ ಪಾಲಿಸಲಾಗುತ್ತಿದೆ. ಈ ಸಂಸ್ಥೆಗೆ ಬೇರೆ ಯಾವುದೇ ಊರಿನಲ್ಲಿ ಶಾಖೆಗಳು ಇರುವುದಿಲ್ಲ ಎಂದು ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.