ಉಡುಪಿ : ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ ವತಿಯಿಂದ ಸ್ವಚ್ಚತಾ ಕಾರ್ಯ
ಉಡುಪಿ (ಉಡುಪಿ ಟೈಮ್ಸ್ ವರದಿ): ಶಾಸ್ತ್ರೀಜಿ ಮತ್ತು ಮಹಾತ್ಮಾ ಗಾಂಧಿ ಜಯಂತಿಯ ಪ್ರಯುಕ್ತ ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯ ಸೂಡ ಪರಿಸರದಲ್ಲಿ ಹಮ್ಮಿಕೊಳ್ಳಾಯಿತು, ಕಾರ್ಯಕ್ರಮದ ಪೂರ್ವ ಶ್ರೀ ಸುಬ್ರಹ್ಮಣ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರಿಗೆ ನಮನ ಸಲ್ಲಿಸಲಾಯಿತು, ಸುಬ್ರಹ್ಮಣ್ಯ ದೇವಸ್ಥಾನದ ಕೆರೆ(ಪುಷ್ಕರಿಣಿ) ದೇವಸ್ಥಾನದ ಸುತ್ತ ಮುತ್ತ,ಪೇಟೆಯ ಇಕ್ಕೆಲಗಳಲ್ಲಿ , ಹಾಗು ಸ್ಥಳೀಯ ಶಾಲಾ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರೈಟ್ ಗ್ರೂಪ್ ಫ್ರೆಂಡ್ಸ್ ಸೂಡ ಇದರ ಅಧ್ಯಕ್ಷರಾದ ಪ್ರದೀಪ್ ದೇವಾಡಿಗ, ಜನನಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ದೀಪಿಕಾ ಅಶೋಕ್ , ಸಂಘದ ಗೌರವ ಸಲಹೆಗಾರರಾದ ಶಂಕರ್ ಕುಂದರ್, ಜೇರಿ ಎಲ್ ಡಿಸೋಜ, ಸಂಘದ ಕಾರ್ಯದರ್ಶಿ ಅನೀಶ್, ಕೋಶಾಧಿಕಾರಿ ಶ್ರೀನಾಥ್ ಶೆಟ್ಟಿ ಮತ್ತು ಸಂಘದ ಸರ್ವ ಸದಸ್ಯರು ಭಾಗವಹಿಸಿದರು.