ಮಲ್ಪೆ: ಮತ್ತೆ ಮುಂದುವರಿದ ಬೋಟ್ ದುರಂತ – 28 ಮೀನುಗಾರರು ಪಾರು

ಉಡುಪಿ (ಉಡುಪಿ ಟೈಮ್ಸ್ ವರದಿ): ಕಳೆದ ಒಂದು ತಿಂಗಳಿಂದ ಮೀನುಗಾರಿಕಾ ಬೋಟುಗಳು ಸರಣಿ ಅಪಘಾತ ನಡೆಯುತ್ತಿದ್ದು, ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ಮಂಗಳವಾರ ಮತ್ತೊಂದು ಮೀನುಗಾರಿಕಾ ಬೋಟ್ ಆಳ ಸಮುದ್ರದಲ್ಲಿ ಅಪಘಾತಕ್ಕೆ ಇಡಾಗಿದೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಸಮಸ್ಯೆಗೀಡಾಗಿದೆ.

 

ಶ್ರೀಕಾಂತ ಪುತ್ರನ್ ಎಂಬುವರಿಗೆ ಸೇರಿದ ಹನುಮಂತ ತೀರ್ಥ ಹೆಸರಿನ ಬೋಟ್ ಮಂಗಳವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ವಾಪಸಾಗುವಾಗ ಸೈಂಟ್ ಮೇರಿಸ್ ದ್ವೀಪ ದ ಬಳಿ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ತಲುಪಿದ್ದು. ಇತರೆ ಬೋಟ್ ಗಳು ತೆರಳಿ ಅವಘಡಕ್ಕೀಡಾದ ಬೋಟ್ ನಲ್ಲಿದ್ದ 28 ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ಮೀನುಗಾರಿಕಾ ಬೋಟ್ ಮುಳುಗಡೆಯ ಹಂತದಲ್ಲಿದ್ದು, ಕೋಟಿಯಷ್ಟು ನಷ್ಟ ಅನುಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!