ರಾಷ್ಟ್ರೀಯ ಶಿಕ್ಷಣ ನೀತಿ ಕೆಲಸಗಳು ಮುಗಿದಿಲ್ಲ ಇನ್ನು ಆರಂಭವಾಗಬೇಕಿದೆ : ಮೋದಿ
ನವದೆಹಲಿ (ಉಡುಪಿ ಟೈಮ್ಸ್ ವರದಿ) : “ರಾಷ್ಟ್ರೀಯ ಶಿಕ್ಷಣ ನೀತಿ -2020ರ ಕೆಲಸಗಳು ಮುಂದಿನ 4 ರಿಂದ 5 ವರ್ಷಗಳ ಕಾಲ ಆಗಬೇಕಿದೆ ಇನ್ನು ಮುಗಿದಿಲ್ಲ. ಅದು ಈಗ ಆರಂಭವಾಗಿದಷ್ಟೇ ಇದರ ಹಿಂದೆ ಅನೇಕ ಪರಿಶ್ರಮ ಇದೆ” ಎಂದು ಪ್ರಧಾನಿ ಮೋದಿ ತಿಳಿಸಿದರು
ಶುಕ್ರವಾರ ಶಿಕ್ಷಣ ಸಚಿವಾಲಯ ಆಯೋಜನೆ ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಡಿಯಲ್ಲಿ ’21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ’ ಕುರಿತ ಸಮಾವೇಶ ಉದ್ದೇಶಿಸಿ ಮಾತನಾಡುತ್ತಾ ಅವರು ಎನ್ಇಪಿ 2020 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ. ಇದು ಏಕಾಏಕಿಯಾಗಿ ರೂಪಗೊಂಡಿಲ್ಲ. ನೂರಾರು ಜನರ ಶ್ರಮ, ಭವಿಷ್ಯದ ದೂರದೃಷ್ಟಿಯ ಅಲೋಚನೆಗಳು ಇದರಲ್ಲಿ ಸೇರಿವೆ ಎಂದರು . ಶಿಕ್ಷಣ ಸಚಿವಾಲಯ ಶಿಕ್ಷಣ ಪರ್ವದ ಅಂಗವಾಗಿ ಸೆಪ್ಟೆಂಬರ್ 10 ಮತ್ತು 11ರಂದು ಈ ಎರಡು ದಿನಗಳ ಸಮಾವೇಶವನ್ನು ಆಯೋಜಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಮಾವೇಶದಲ್ಲಿ ಪಾಲ್ಗೊಂಡರು.