ಉಡುಪಿ: ಆ.31 ಕ್ಕೆ ಇ – ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಶೋ ರೂಮ್ ಉದ್ಘಾಟನೆ
ಉಡುಪಿ( ಉಡುಪಿ ಟೈಮ್ಸ್ ವರದಿ): ಪರಿಸರದ ಮೇಲೆ ಆಗುತ್ತಿರುವ ನಿರಂತರ ಪ್ರಹಾರ, ಪೆಟ್ರೋಲ್ ಡೀಸೆಲ್ ದಿನೇ ದಿನೇ ಹೆಚ್ಚುತ್ತಿರುವ ದರಗಳಿಂದಾಗಿ ತತ್ತರಿಸುತ್ತಿರುವ ಜನರಿಗಾಗಿ ಉಡುಪಿಯಲ್ಲಿ ಆರಂಭವಾಗುತ್ತಿದೆ ಪರಿಸರ ಸ್ನೇಹಿ ಇ -ಎಲೆಕ್ಟ್ರಿಕಲ್ ದ್ವಿಚಕ್ರ ವಾಹನದ ಮಳಿಗೆ.
ಉಡುಪಿಯ ಕರಾವಳಿ ಜಂಕ್ಷನ್ ನ ಕಾರ್ತಿಕ್ ಟ್ರೇಡ್ ಸೆಂಟರ್ ನಲ್ಲಿ ಶ್ರೀ ಮಹಾಮಾಯ ಎಂಟರ್‌ಪ್ರೈಸಸ್ ದ್ವಿಚಕ್ರ ವಾಹನದ ಶೋ ರೂಮ್ ಸೋಮವಾರ ಉದ್ಘಾಟನೆಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ಶಾಸಕ ರಘುಪತಿ ಭಟ್, ಮುಖ್ಯ ಅತಿಥಿಯಾಗಿ ಕರ್ನಾಟಕ ಸ್ಟೇಟ್ ಜ್ಯುವೆಲ್ಲರ್‍ಸ್ ಚೇರ್ ಮ್ಯಾನ್ ಜಿ. ಜಯ ಆಚಾರ್ಯ, ಮತ್ತು ಇ- ಕಾರ್ಬನ್ ನ್ಯೂಟ್ರಾಲಜಿ ಸುರತ್ಕಲ್ ಡೀಲರ್ ಸುರೇಶ ಶೆಟ್ಟಿ, ಪದ್ಮರಾಜ್ ಮೊಯ್ಲಿ ಉಪಸ್ಥಿತರಿರುವರು. ವಾಹನದ ವಿಶೇಷತೆಯು – ಇ-ಕಾರ್ಬನ್ ನ್ಯೂಟ್ರಾಲಜಿ ಕಂಪೆನಿಯ ದ್ವಿಚಕ್ರ ವಾಹನಗಳು ಹೊಗೆ ರಹಿತವಾಗಿದ್ದು, ಪರಿಸರ ಸ್ನೇಹಿಯಾಗಿದೆ, ಒಮ್ಮೆ ಬ್ಯಾಟರಿ ಚಾರ್ಜ್ ಆದರೆ 100 ಕಿ.ಮೀ ಮೈಲೇಜ್ ನೀಡಲಿದೆ.
ಪ್ರತಿ ಕಿಲೋ ಮೀಟ್‌ರ್‌ಗೆ ಕೇವಲ 10 ಪೈಸೆಕ್ಕಿಂತ ಕಡಿಮೆ ವೆಚ್ಚ ತಗಲಿದೆ. ವಾಹನಕ್ಕೆ ಯಾವುದೇ ನೊಂದಾವಣೆ ಇಲ್ಲ, ಮೋಟಾರು ವಾಹನ ಕಾಯಿದೆಯಿಂದ ವಿನಾಯಿತಿಯಿದೆ. ಈ ವಾಹನದಲ್ಲಿ ಸೆಂಟ್ರಲ್ ಲಾಕ್ ಹಾಗೂ ರಿಮೋಟ್ ಕಂಟ್ರೋಲ್ (ಜಿ.ಪಿ.ಎಸ್) ಟ್ರ್ರಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಬ್ಯಾಟರಿಗೆ 3 ವರ್ಷಗಳ ಕಾಲ ವಾರಂಟಿ ಹಾಗೂ ವಾಹನಕ್ಕೆ 1 ವರ್ಷ ಕಾಲ ವಾರಂಟಿ ಇರುತ್ತದೆ ಎಂದು ಸಂಸ್ಥೆಯ ಆಡಳಿತ ಅಧಿಕಾರಿ ನವೀನ್ ಎನ್ .ಕುಮಾರ್ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರಕಾರಿ ಸಾಮ್ಯದ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಲಭ್ಯವಿದೆ ಪ್ರಾರಂಭೋತ್ಸವದ ಸಲುವಾಗಿ ಮುಂಗಡ ಬುಕ್ಕಿಂಗ್‌ನ ವಿಶೇಷ ರಿಯಾಯತಿ ಹಾಗೂ ಕ್ಯಾಶ್ ಬ್ಯಾಕ್ ಆಫರ್‌ಗಳು ಲಭ್ಯವಿದೆ, ಎಂದು ಸಂಸ್ಥೆಯ ನಿರ್ದೇಶಕ ಸುಧೀಂದ್ರ ಬಿ. ಶೇಟ್ ತಿಳಿಸಿದ್ದಾರೆ.
All the best
Very good
Price tell me
Super