ಮಂಗಳೂರು: ಕ್ರೈಸ್ತ ಧರ್ಮ ಪ್ರಾಂತ್ಯದ ಪಿಆರ್‌ಒ ಆಗಿ ರೊನಾಲ್ಡ್ ಕ್ಯಾಸ್ಟೆಲಿನೊ ನೇಮಕ
ಮಂಗಳೂರು(ಉಡುಪಿ ಟೈಮ್ಸ್ ವರದಿ) :ಮಂಗಳೂರು ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಆಗಿ ರೊನಾಲ್ಡ್ ಕ್ಯಾಸ್ಟೆಲಿನೊ ಅವರನ್ನು ನೇಮಕ ಮಾಡಲಾಗಿದೆ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 7 ರಿಂದ ಮೂರು ವರ್ಷಗಳವರೆಗೆ ಮಂಗಳೂರು ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರಲಿದ್ದಾರೆ. ಚರ್ಚ್‌ನ ಸಾರ್ವಜನಿಕ ಸಂಪರ್ಕ, ಮಾಧ್ಯಮಗಳು ಮತ್ತು ಪತ್ರಕರ್ತರೊಂದಿಗೆ ಸಂಪರ್ಕ, ಸರ್ಕಾರಿ ಕಚೇರಿಗಳು ಮತ್ತು ಮಂತ್ರಿಗಳ ಜೊತೆ ಸಂಪರ್ಕ ಸಾಧಿಸಲು, ಪ್ರಾಂತ್ಯಕ್ಕೆ ಸಂಬಂಧಿಸಿದ ಪತ್ರಿಕಾ ಹೇಳಿಕೆಗಳ ನಿರ್ವಹಣೆ, ಸಮಯಕ್ಕೆ ಸರಿಯಾಗಿ ಪತ್ರಿಕಾಗೋಷ್ಠಿ ಹಾಗೂ ಪತ್ರಿಕಾ ಪ್ರಕಟಣೆ ನಡೆಸುವುದು, ಪತ್ರಿಕಾ ಹೇಳಿಕೆಗಳನ್ನು ನೀಡುವುದು ಈ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಯಿತು.