ಅಡುಗೆ ಅನಿಲ ಸಿಲಿಂಡರ್ ಮೇಲೆ ಬರೋಬ್ಬರಿ 250 ರೂ ಹೆಚ್ಚಳ
ಹೊಸದಿಲ್ಲಿ ಎ.1 : ಇಂದಿನಿಂದ ಅಡುಗೆ ಅನಿಲ ಬೆಲೆ 250 ರಷ್ಟು ಏರಿಕೆ ಆಗಲಿದೆ. ಅದರಂತೆ ಇಂದಿನಿಂದ ದೆಹಲಿಯಲ್ಲಿ 19 ಕೆ.ಜಿ. ಸಿಲಿಂಡರ್ ದರ 2,253 ರೂಪಾಯಿ ಆಗಿದೆ.
ಇಂದಿನಿಂದ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರ ದೆಹಲಿಯಲ್ಲಿ ರೂ. 949.50, ಕೊಲ್ಕತ್ತಾದಲ್ಲಿ ರೂ. 976, ಮುಂಬೈನಲ್ಲಿ ರೂ. 949.5 ಮತ್ತು ಚೆನ್ನೈನಲ್ಲಿ ರೂ. 965.5 ಆಗಲಿದೆ.
ಕಳೆದ ಎರಡು ತಿಂಗಳಲ್ಲಿ 19 ಕೆಜಿ ಎಲ್‍ಪಿಜಿ ಸಿಲಿಂಡರ್ ದರವನ್ನು ಪ್ರತಿ ಸಿಲಿಂಡರ್ ಗೆ 346 ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಮಾರ್ಚ್ 1ರಂದು 19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರವನ್ನು 105 ರೂಪಾಯಿ ಹೆಚ್ಚಿಸಲಾಗಿದ್ದು, ಬಳಿಕ ಮಾರ್ಚ್ 22ರಂದು 9 ರೂಪಾಯಿ ಇಳಿಸಲಾಗಿತ್ತು.
ಇನ್ನು ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ದರ ನಿರಂತರವಾಗಿ ಹೆಚ್ಚುತ್ತಲೇ ಇದೆ. ಮಾರ್ಚ್ 22ರಂದು ಸಬ್ಸಿಡಿಯುಕ್ತ ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಿಸಲಾಗಿತ್ತು.