ನವದೆಹಲಿ: ಅಂತರಾಷ್ಟ್ರೀಯ ವಿಮಾನಗಳ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ನವದೆಹಲಿ ಮಾ. 26 : ಅಂತರಾಷ್ಟ್ರೀಯ ವಿಮಾನಗಳ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸಿಬ್ಬಂದಿಗಳಿಗೆ ಸಂಪೂರ್ಣ ವೈಯಕ್ತಿಕ ರಕ್ಷಣಾ ಸಾಧನ ಅಥವಾ ಪಿಪಿಇ ಕಿಟ್ ಅವಶ್ಯಕತೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿದೆ.
ಮಾ.27 ರಿಂದ ಪುನರಾರಂಭಗೊಳ್ಳಲಿರುವ ಅಂತರಾಷ್ಟ್ರೀಯ ವಿಮಾನಗಳ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಸಾಮಾಜಿಕ ಅಂತರಕ್ಕಾಗಿ ಮೂರು ಆಸನಗಳನ್ನು ಖಾಲಿ ಇಡುವ ಅಗತ್ಯವನ್ನು ಈಗ ರದ್ದುಗೊಳಿಸಲಾಗಿದೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಪ್ಯಾಟ್-ಡೌನ್ ಶೋಧವನ್ನು ಸಹ ಮತ್ತೆ ಪರಿಚಯಿಸಲಾಗಿದ್ದು, ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಲಾಗಿದೆ.