ಮಕ್ಕಳಿಗೆ ವಿದ್ಯೆಗಿಂತ ಹೆಚ್ಚು ಮತ್ತೊಂದಿಲ್ಲ,ನ್ಯಾಯಾಲಯ ತೀರ್ಪನ್ನು ವಿದ್ಯಾರ್ಥಿಗಳು ಪಾಲಿಸಬೇಕು: ಮುಖ್ಯಮಂತ್ರಿ
ಬೆಂಗಳೂರು ಮಾ. 15 : ಮಕ್ಕಳಿಗೆ ವಿದ್ಯೆಗಿಂತ ಹೆಚ್ಚು ಮತ್ತೊಂದಿಲ್ಲ. ನ್ಯಾಯಾಲಯ ಕೊಟ್ಟಿರುವ ತೀರ್ಪನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ಹೈ ಕೋಟ್ ನೀಡಿರುವ ತೀರ್ಪಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಹಿಜಬ್ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯ ಮತ್ತೊಂದಿಲ್ಲ. ತ್ರೀ ಸದಸ್ಯ ಪೀಠ ನೀಡಿರುವ ತೀರ್ಪನ್ನು ಎಲ್ಲರೂ ಸಹ ಪಾಲಿಸಬೇಕು. ಇದನ್ನು ಅನುಷ್ಟಾನಗೊಳಿಸುವ ಸಮಯದಲ್ಲಿ ಎಲ್ಲರೂ ಸಹಕರಿಸಿ ಶಾಂತಿಯನ್ನು ಪಾಲಿಸಬೇಕು ಎಂದರು.
ಎಲ್ಲಾ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪನ್ನು ಪಾಲಿಸಿ. ನಿಮ್ಮ ಶಿಕ್ಷಣ ನಿಮಗೆ ಬಹಳ ಮುಖ್ಯ. ಎಲ್ಲಾ ವಿದ್ಯಾರ್ಥಿಗಳು ತರಗತಿಗೆ, ಪರೀಕ್ಷೆಗೆ ಆಗಮಿಸಿ. ಒಂದು ವೇಳೆ ಹೈಕೋರ್ಟ್ ತೀರ್ಪನ್ನು ನಿರಾಕರಿಸಿ ಕಾನೂನು ಸುವ್ಯಸ್ಥೆಯನ್ನು ಕೈಗೆತ್ತಿಕೊಂಡರೆ ನಮ್ಮ ಗೃಹ ಇಲಾಖೆ ಕಠಿಣವಾದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬಹಳ ಮುಖ್ಯ ಎಂದ ಅವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಸಮುದಾಯ ನಾಯಕರು, ಪಾಲಕರು ಈ ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.