ಉಡುಪಿ: ಕಾರಿಗೆ ಲಾರಿ ಡಿಕ್ಕಿ ಹೊಡೆದು ನಾಲ್ವರ ಸಾವಿಗೆ ಕಾರಣನಾದ ಅಪರಾಧಿ ಚಾಲಕನಿಗೆ ಜೈಲು

ಉಡುಪಿ ಫೆ.28 : ಕಾರಿಗೆ ಲಾರಿ ಡಿಕ್ಕಿ ಹೊಡೆದು ನಾಲ್ವರ ಸಾವಿಗೆ ಕಾರಣನಾದ ಅಪರಾಧಿ ಲಾರಿ ಚಾಲಕನಿಗೆ ಉಡುಪಿ ಪ್ರಧಾನ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಅರು ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೂರಕ ಸಾಕ್ಷಿ ಹಾಗೂ ವಾದ ವಿವಾದಗಳನ್ನು ಅಲಿಸಿದ ನ್ಯಾಯಾಲಯವು ಲಾರಿ ಚಾಲಕ ಸಂತೋಷ್ ಎಸ್ ಅಂಬಿಗ ನ ಮೇಲಿನ ಅರೋಪ ಸಾಬೀತಾದ ಹಿನ್ನಲೆಯಲ್ಲಿ ಅರೋಪಿಗೆ ನ್ಯಾಯಧೀಶರಾದ ದೀಪರವರು ಅರು ತಿಂಗಳುಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಸರಕಾದ ಪರವಾಗಿ ಸರಕಾರಿ ಅಭಿಯೋಜಕ ಬದರೀನಾಥ್ ನಾಯರಿ ಯವರು ವಾದ ಮಂಡಿಸಿದ್ದರು.

2014 ರ ಡಿಸೆಂಬರ್ 7 ರಂದು ರಾತ್ರಿ ಪೆರ್ಡೂರು ಬಳಿಯ ಪಾಡಿಗಾರ್ ಬಳಿ ಉಡುಪಿಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದ ಕಾರಿಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನಲ್ಲಿದ್ದ ಮನೋಹರ ಭಕ್ತ, ಮನೋರಮ ಭಕ್ತ, ಸ್ವಾತಿ, ಕುಮಾರಿ ಸಂಜನಾ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡು ಸಾವನ್ನಪ್ಪಿದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!