ಉದ್ಯಾವರ: ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ
ಉದ್ಯಾವರ ಫೆ.28 (ಉಡುಪಿ ಟೈಮ್ಸ್ ವರದಿ) : ರಾಜ್ಯ ಸರಕಾರದ ಗ್ರಾಮ ಒನ್ ಯೋಜನೆಯಡಿ ನೂತನವಾಗಿ ಪ್ರಾರಂಭಗೊಂಡ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭ ಇಂದು ಉದ್ಯಾವರ ಪಂಚಾಯತ್ ಕಟ್ಟಡದಲ್ಲಿ ನಡೆಯಿತು.
ಈ ನೂತನ ಕೇಂದ್ರವನ್ನು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉದ್ಯಾವರದಲ್ಲಿ ಸಿಎಸ್‍ಸಿ ಮೂಲಕ ಅನಾರೋಗ್ಯ ಪೀಡಿತರ ಮನೆ ಬಾಗಿಲಿಗೆ ತೆರಳಿ ಹಲವಾರು ಸರಕಾರಿ ಸೌಲಭ್ಯ ಗಳನ್ನು ಫಲಾನುಭವಿಗಳಿಗೆ ದೊರಕಿಸಿ ಕೊಡುವ ಮೂಲಕ ಮಾನವೀಯ ಸೇವೆ ಸಲ್ಲಿಸುತ್ತಿರುವ ಸೌಮ್ಯ ಉದ್ಯಾವರ ಇವರು ಇದೀಗ ಗ್ರಾಮ ಒನ್ ಕೇಂದ್ರ ಸ್ಥಾಪಿಸಿರುವುದರಿಂದ ರಾಜ್ಯ ಸರಕಾರದ ಹಲವಾರು ಯೋಜನೆಗಳು ಒಂದೇ ಸೂರಿನಡಿಯಲ್ಲಿ ಜನಸಾಮಾನ್ಯರಿಗೆ ಸಿಗುವಂತಾಗಲಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಮಧುಲತಾ ಶಶಿಧರ್ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಎಚ್‍ಆರ್., ಗ್ರಾಮಲೆಕ್ಕಾಧಿಕಾರಿ ಸುರೇಶ್. ಪಿ ,ಸಿಎ ಮಲ್ಲೇಶ್ ಪಿತ್ರೋಡಿ. ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಅಧಿಕಾರಿ ನವೀಶ ವಿಎ, ಸಂಸ್ಥೆಯ ಸಂಚಾಲಕಿ ಸೌಮ್ಯ ಉದ್ಯಾವರ, ಹರಿ ಉದ್ಯಾವರ ಹಾಗೂ ಉದ್ಯಾವರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು. ಸನ್ ಶೈನ್ ಲಯನ್ಸ್ ಉದ್ಯಾವರದ ಸದಸ್ಯರು ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.