ನೊಂದ ವ್ಯಕ್ತಿಯ ಬಾಳಿನಲ್ಲಿ ಬೆಳಕು ಮೂಡಿಸಿದ ಹೊಸಬೆಳಕು ಆಶ್ರಮ

ಉಡುಪಿ ಫೆ.28( ಉಡುಪಿ ಟೈಮ್ಸ್ ವರದಿ): ನಗರದ ಆಸುಪಾಸಿನಲ್ಲಿ ಒಂದು ವಾರದಿಂದ ಅರೆನಗ್ನನಾಗಿ ತಿರುಗಾಡುತಿದ್ದ ಮಾನಸಿಕ ವಾಗಿ ನೊಂದಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮನೆಗೆ ಸೇರಿಸಲಾಗಿದೆ.

ಪದ್ದೂತ್ ಮಂಡೂಕ್ ಎಂಬ ವ್ಯಕ್ತಿ ಫೆ.25 ರಂದು ರಾತ್ರಿ 12 ಗಂಟೆಗೆ ಸುಮಾರಿಗೆ ಅಸಹಾಯಕನಾಗಿ ಇರುವುದನ್ನು ಕಂಡ ಸ್ಥಳೀಯ ದಯಾನಂದ ಕೋಟ್ಯಾನ್ ಅವರು ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ, ವಿಶು ಶೆಟ್ಟಿಯವರು ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ವಿನಯಚಂದ್ರ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಹೊಸಬೆಳಕು ಆಶ್ರಮದ ಆಂಬ್ಯುಲೆನ್ಸ್ ಮೂಲಕ ರಕ್ಷಣೆ ಮಾಡಲಾಯಿತು.

ಇದೀಗ ರಕ್ಷಣೆ ಮಾಡಿದ ಮೂರು ದಿನಗಳ ಬಳಿಕ ಪದ್ದೂತ್ ಮಂಡೂಕ್ ಯಾವುದೋ ಒಂದು ಫೋನ್ ನಂಬರ್ ಹೇಳಿದ ಮೇರೆಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಬಳಿಕ ಉಡುಪಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸಂಬಂಧಿಯವರಿಗೆ ಕೊಲ್ಕತ್ತಾದಿಂದ ಮಾಹಿತಿ ರವಾನಿಸಿದ್ದು, ನಿನ್ನೆ ಹೊಸಬೆಳಕು ಆಶ್ರಮಕ್ಕೆ ಬಂದ ಸಂಬಂಧಿಕರು ಪದ್ದೂತ್ ಮಂಡೂಕ್ ಅವರನ್ನು ಜೊತೆಗೆ ಮನೆಗೆ ಕರೆದುಕೊಂಡು ಹೋದರು.

Leave a Reply

Your email address will not be published. Required fields are marked *

error: Content is protected !!