ಉಕ್ರೇನ್ ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತಾಸ್ತ್ರಗಳನ್ನು ನೀಡುತ್ತೇವೆ: ಉಕ್ರೇನ್ ಅಧ್ಯಕ್ಷ ಟ್ವಿಟ್
ಉಕ್ರೇನ್ : ದೇಶವನ್ನು ರಕ್ಷಿಸುವ ಬಯಸುವ ಎಲ್ಲರಿಗೂ ನಾವೂ ಶಸ್ತಾಸ್ತ್ರಗಳನ್ನು ನೀಡುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಟ್ವಿಟ್ ಮಾಡಿದ ಅವರು ನಮ್ಮ ನಗರಗಳನ್ನು ರಕ್ಷಿಸಲು ರಸ್ತೆಗಳಲ್ಲಿ ಉಕ್ರೇನ್ ನ ಪರವಾಗಿ ನಿಲ್ಲಲು ಸಿದ್ಧರಾಗಿರಿ ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತಾಸ್ತ್ರಗಳನ್ನು ನೀಡುತ್ತೇವೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ನಾಗರಿಕರ ಮೇಲಿನ ಎಲ್ಲ ನಿರ್ಬಂಧಗಳನ್ನು ನಾವೂ ತೆಗೆದೇ ಹಾಕುತ್ತೇವೆ. ಕೈಯಲ್ಲಿ ಶಸ್ತಾಸ್ತ್ರಗಳನ್ನು ಹಿಡಿದು ದೇಶವನ್ನು ರಕ್ಷಿಸಲು ಸಿದ್ದರಾಗಿ ಎಂದವರು ತಿಳಿಸಿದರು.
ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ನಾಜಿ ಜರ್ಮನಿಯ ರೀತಿಯಲ್ಲಿಯೇ ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ. ದುಷ್ಟ ಮಾರ್ಗವನ್ನು ರಷ್ಯಾ ಅನುಸರಿಸಿದೆ. ಆದರೆ ,ಉಕ್ರೇನ್ ತನ್ನನು ತಾನು ರಕ್ಷಿಸಿಕೊಳ್ಳುತ್ತಿದೆ. ಮಾಸ್ಕೊ ಯಾವ ಕ್ರಮ ಕೈಗೊಂಡರೂ, ಉಕ್ರೇನ್ ತನ್ನ ಸ್ವಾತಂತ್ರವನ್ನು ಬಿಟ್ಟುಕೊಡುವುದಿಲ್ಲ ,ನಾವೂ ರಷ್ಯಾ ದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದ್ದೇವೆ. ಆತ್ಮ ಸಾಕ್ಷಿಯನ್ನು ಕಳೆದುಕೊಳ್ಳದ ಪ್ರತಿಯೊಬ್ಬ ರಷ್ಯಾದ ನಾಗರಿಕರು ಈ ಯುದ್ಧ ಪ್ರತಿಭಟಿಸುವ ಸಮಯವಿದು. ಎಂದವರು ಟ್ವಿಟ್ ಮಾಡಿದ್ದಾರೆ.
ಪಾಶಿಮಾತ್ಯ ದೇಶಗಳು ಹಾಗೂ ವಿಶ್ವ ಸಮುದಾಯದ ಎಚ್ಚರಿಕೆಯನ್ನು ದಿಕ್ಕರಿಸಿ ರಷ್ಯಾದ ಅಧ್ಯಕ್ಷ ಪುಟಿನ್ ಗುರುವಾರ ಉಕ್ರೇನ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ತಮ್ಮ ಶಸ್ತಾಸ್ತ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ತಿಳಿಸಿದ್ದಾರೆ.
ರಷ್ಯಾ ಕ್ರಮವನ್ನು ಅಮೇರಿಕ ಸೇರಿದಂತೆ ಬ್ರಿಟನ್ ಹಾಗೂ ಹಲವು ರಾಷ್ಟ್ರಗಳ ನಾಯಕರು ಖಂಡಿಸಿದ್ದಾರೆ.