ಶಿವಮೊಗ್ಗ: ಹರ್ಷ ಹತ್ಯೆ ಪ್ರಕರಣ ಪೊಲೀಸರಿಂದ 7 ಮಂದಿ ಆರೋಪಿಗಳ ಬಂಧನ
ಶಿವಮೊಗ್ಗ ಫೆ.22 : ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಶಿವಮೊಗ್ಗ ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಪ್ರಕರಣದ ಕ್ಷಿಪ್ರ ಕಾರ್ಯಾಚರಣೆಯ ನಡೆಸಿದ ಪೊಲೀಸರು ಘಟನೆ ನಡೆದು ನಡೆದು 24 ಗಂಟೆಯೋಳಗೆ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಸಯ್ಯದ್ ನದೀಮ್, ಖಾಸಿಫ್, ಅಫಾನ್, ಖಾಸಿ ಅಲಿಯಾಸ್ ಸಲ್ಮಾನ್, ಚಿಕು, ಸಲ್ಮಾನ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು 12 ಮಂದಿಯನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಘಟನೆ ನಡೆದ 24 ಘಂಟೆಯ ಒಳಗಡೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ರಾಜ್ಯ ಗೃಹ ಇಲಾಖೆ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಈ ಬಗ್ಗೆ ಎಡಿಜಿಪಿ ಮುರುಗನ್ ಅವರು ಪ್ರತಿಕ್ರಿಯೆ ನೀಡಿ, “ಈ ಹತ್ಯೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವಂತಹ ಪ್ರತಿಯೊಬ್ಬರನ್ನು ಕೂಡ ಹಿಡಿದು ಕಾನೂನಿನ ಪ್ರಕ್ರಿಯೆಗಳಿಗೆ ಒಳಪಡಿಸುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ” ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಹೇರಲಾಗಿದೆ. ಹಾಗೂ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.