ಉಡುಪಿ:ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಅಂಗನವಾಡಿ ಕೇಂದ್ರಕ್ಕೆ ಕುರ್ಚಿ ವಿತರಣೆ
ಉಡುಪಿ ಫೆ.22 (ಉಡುಪಿ ಟೈಮ್ಸ್ ವರದಿ) : ಜಿಲ್ಲೆಯ ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗದ ವತಿಯಿಂದ ಕಸ್ತೂರ್ಬಾನಗರದ ಅಂಗನವಾಡಿ ಕೇಂದ್ರಕ್ಕೆ, ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ನೀಡಿದ 10 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗದ ಅಧ್ಯಕ್ಷ ಚರಣ್ ಬಂಗೇರ, ಶ್ರೀ ಭಗವತೀ ನಾಸಿಕ್ ಕಲಾ ತಂಡದ ಅಧ್ಯಕ್ಷ ಪ್ರಣಾಮ್ ಕುಮಾರ್, ಉಪಾಧ್ಯಕ್ಷ ಉಮೇಶ್, ಕೋಶಾಧಿಕಾರಿ ಸುಧೀರ್, ಸದಸ್ಯರಾದ ಸಂತೋಷ್, ನಿತಿನ್, ಕಿಶನ್, ಅಂಗನವಾಡಿ ಶಿಕ್ಷಕಿ ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.