ಕೋಟ: ಮೀನುಗಾರಿಕೆ ಸಮಯದಲ್ಲಿ ಕಾಲುಜಾರಿ ನೀರಿಗೆ ಬಿದ್ದು ವ್ಯಕ್ತಿ ಮೃತ
ಕೋಟ ಫೆ.22 (ಉಡುಪಿ ಟೈಮ್ಸ್ ವರದಿ) : ಸೀತಾನದಿಯಲ್ಲಿ
ಮೀನುಗಾರಿಕೆ ಕೆಲಸ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮಂಜುನಾಥ ಖಾರ್ವಿ (45) ಎಂಬವರು ಮೃತ ಪಟ್ಟಿದ್ದಾರೆ.
ಇವರು ಪ್ರತಿದಿನ ಸೀತಾನದಿಯಲ್ಲಿ ಸಾಂಪ್ರದಾಯಿಕ ನಾಡ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಎಂದಿನಂತೆ ನಿನ್ನೆ ಬೆಳಿಗ್ಗೆ ಮೀನುಗಾರಿಕೆ ನಡೆದುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ ಎಂಬುದಾಗಿ ಕೃಷ್ಣ ಬಂಗೇರ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.