ಕಾರ್ಕಳ: ವ್ಯಕ್ತಿ ನಾಪತ್ತೆ
ಕಾರ್ಕಳ ಫೆ.22 (ಉಡುಪಿ ಟೈಮ್ಸ್ ವರದಿ) : ಮಿಯಾರು ಗ್ರಾಮದ ಬೋರ್ಕಟ್ಟೆಯ ನಿವಾಸಿ ಬಿ. ವಿಜೇಂದ್ರ ಪ್ರಭು ನಾಪತ್ತೆಯಾಗಿದ್ದಾರೆ.
56 ವರ್ಷದ ಬಿ ವಿಜೇಂದ್ರ ಪ್ರಭು ಬೋರ್ಕಟ್ಟೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಬೆಂಗಳೂರು ಹಾಗೂ ಮುಂಬೈನಲ್ಲಿ ಇದ್ದ ಇವರ ಸಹೋದರರು ಕಾರ್ಯಕ್ರಮ ಇದ್ದಾಗೆಲ್ಲಾ ಊರಿಗೆ ಬಂದು ಹೋಗುತ್ತಿದ್ದರು. ಅದರಂತೆ ನಿನ್ನೆ ವಿಜೇಂದ್ರ ಅವರ ಸಹೋದರ ರಾಘವೇಂದ್ರ ಪ್ರಭು ಅವರು ಮನೆಗೆ ಬಂದಿದ್ದು ಈ ವೇಳೆ ತಮ್ಮ ವಿಜೇಂದ್ರ ಪ್ರಭು ಮನೆಯಲ್ಲಿ ಇಲ್ಲದೇ ಇರುವುದು ಕಂಡುಬಂದಿದೆ.
ಈ ಬಗ್ಗೆ ಆಸುಪಾಸಿನಲ್ಲಿ ವಿಚಾರಿಸಿದಾಗ ಅವರೂ ವಿಜೇಂದ್ರ ಅವರನ್ನು ಸುಮಾರು ದಿನದಿಂದ ನೋಡಿಲ್ಲ ಎಂದು ತಿಳಿಸಿರುತ್ತಾರೆ. ಅದರಂತೆ ವಿಜೇಂದ್ರ ಅವರು ಕಾಣೆಯಾಗಿರುವುದಾಗಿ ನೀಡಿದ ರಾಘವೇಂದ್ರ ಪ್ರಭು ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.