ಜೆಸಿಐ ಕುಂದಾಪುರ ಜೆಸಿ ಸಪ್ತಾಹ-2020 ಉದ್ಘಾಟನೆ
ಕುಂದಾಪುರ(ಉಡುಪಿ ಟೈಮ್ಸ್ ವರದಿ): ಜೆಸಿಐ ಸಂಸ್ಥೆಯು ವ್ಯಕ್ತಿತ್ವ ವಿಕಸನದ ಸಂಸ್ಥೆಯಾಗಿದ್ದು ಈ ಸಂಸ್ಥೆ ಯುವಜನರನ್ನು ಕ್ರಿಯಾಶೀಲರನ್ನಾಗಿಸುತ್ತದೆ ಎಂದು ಜೇಸಿಐ ಭಾರತ ಇದರ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಸೆನೆಟರ್ ಸದಾನಂದ ನಾವಡ ತಿಳಿಸಿದರು.
ಜೇಸಿಐ ಕುಂದಾಪುರ ಇದರ ಜೇಸಿ ಸಪ್ತಾಹ 2020 ರ ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನವಂಬರ್ 29 ರಿಂದ ಡಿಸಂಬರ್ 5 ರವರೆಗೆ ಜೆಸಿ ಭವನ ಕುಂದಾಪುರದಲ್ಲಿ ನಡೆಯಲಿದೆ , ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ಡಾ .ಉಮೇಶ್ ಪುತ್ರನ್, ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ ಹಟ್ಟಿಯಂಗಡಿ, ಎ 1 ಗುತ್ತಿಗೆದಾರರಾದ ಕೆ ಆರ್ ನಾಯ್ಕ್, ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷ ಜೇಸಿ ಗೋಪಾಲ ಪೂಜಾರಿ, ಜೆಸಿಐ ಕುಂದಾಪುರದ ನಿಕಟ ಪೂರ್ವ ಅಧ್ಯಕ್ಷ ಹಾಗು ವಲಯ ತರಬೇತಿ ವಿಭಾಗದ ನಿರ್ದೇಶಕ ಜೆಸಿ ಅಶೋಕ್ ತೆಕಟ್ಟೆ, ಸಭಾಧ್ಯಕ್ಷತೆಯನ್ನು ಜೆಸಿಐ ಕುಂದಾಪುರದ ಅಧ್ಯಕ್ಷರಾದ ಜೆಸಿ ಸತೀಶ್ ಮೊಗವೀರ್ ವಹಿಸಿದ್ದರು ವೇದಿಕೆಯಲ್ಲಿ ಜೆಸಿಐ ಕುಂದಾಪುರದ ಕಾರ್ಯದರ್ಶಿ ಸುಧಾಕರ್ ಕಾಂಚನ್, ಜೆಸಿರೇಟ್ ಅಧ್ಯಕ್ಷೆ ನಾಗರತ್ನ ಚಂದ್ರಶೇಖರ್, ಜೆ ಜೆ ಸಿ ಅಧ್ಯಕ್ಷರಾದ ಅಶ್ವಥ್ , ಸಪ್ತಾಹ ಸಭಾಪತಿ ಪ್ರವೀಣ್ ಉಪಸ್ಥಿತರಿದ್ದರು
ಪ್ರತಿ ದಿನ ಸಂಜೆ ಉಡುಪಿ ಜಿಲ್ಲಾ ಮಟ್ಟದ ಕರೋಕೆ ಗೀತಾ ಗಾಯನ ಸ್ಪರ್ಧೆಯಲ್ಲಿ ಕೋಸ್ಟಲ್ ಮೆಲೋಡಿ ಸ್ಟಾರ್,ಭಾಷಣ ಸ್ಪರ್ಧೆ ಕುಂದಾಪುರ ಕನ್ನಡ ಕಣ್ಮಣಿ, ಸ್ಟಾಂಡ್ ಅಪ್ ಕಾಮಿಡಿ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿರುವುದು
ಡಿಸೆಂಬರ್ 5 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೋಟೇಶ್ವರದ ಸಹನಾ ಗ್ರೂಪ್‌ನ ಮಾಲಕ ಸುರೇಂದ್ರ ಶೆಟ್ಟಿ, ಜೇಸಿಐ ಕುಂದಾಪುರ ಇದರ ಪೂರ್ವಾಧ್ಯಕ್ಷ ಖ್ಯಾತ ನ್ಯಾಯವಾದಿ ಜೇಸಿ ರವಿಕಿರಣ ಮುರ್ಡೇಶ್ವರ, ಜೇಸಿಐ ಭಾರತ ಇದರ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಜೇಸಿ ಶ್ರೀಧರ್ ಪಿ ಎಸ್, ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಹೆಮ್ಮಾಡಿ ಗಾಣಿಗ ಯುವ ಸಂಘಟನೆಯ ರೈತ ಮೋರ್ಚಾದ ಉಪಾಧ್ಯಕ್ಷ ರವಿ ಗಾಣಿಗ, ಪಿಡಬ್ಲೂಡಿ ಗುತ್ತಿಗೆದಾರ ಗಣೇಶ ಪೂಜಾರಿ ಕೆಂಚನೂರು ಭಾಗಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೇಸಿಐ ಕುಂದಾಪುರ ಇದರ ಪೂರ್ವಾಧ್ಯಕ್ಷರಾದ ಜೇಸಿ ವಿಷ್ಣು ಕೆ.ಬಿ ಇವರಿಗೆ ಕಮಲ ಪತ್ರ ಪುರಸ್ಕಾರ ನೀಡಿ ಗೌರವಿಸಲಾಗುವುದು