ಬೆಂಗಳೂರು: ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ

ಬೆಂಗಳೂರು(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್ ಹಿನ್ನೆಲೆಯಲ್ಲಿ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಾಂತ್ರಿಕ ತಜ್ಞರ ಜೊತೆ ಸಭೆ ನಡೆಸಿ ನಂತರ ಸಚಿವ ಆರ್ ಅಶೋಕ್ ಹಾಗೂ ಸಚಿವ ಡಾ. ಸುಧಾಕರ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ರಾಜ್ಯದೆಲ್ಲೆಡೆ ವಾರಾಂತ್ಯ ಕರ್ಫ್ಯೂ ಜಾರಿಯಾಗಿದ್ದು ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ನೈಟ್ ಕರ್ಫ್ಯೂ 2 ವಾರಗಳ ಕಾಲ ಮುಂದುವರಿಕೆ ಮಾಡಿದ್ದೂ ಮದುವೆ ಸಮಾರಂಭಗಳಲ್ಲಿ ಹೊರಾಂಗಣ-200 ಜನ ಒಳಾಂಗಣದಲ್ಲಿ-100 ಜನ ಭಾಗವಹಿಸಲು ಅನುಮತಿಯನ್ನು ನೀಡಲಾಗಿದೆ. ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಮುಂದಿನ ಎರಡುವಾರಗಳ ಕಾಲ ಮಾರ್ಗಸೂಚಿ ಜಾರಿ. ಇದರೊಂದಿಗೆ ನೈಟ್ 10ರಿಂದ ಮುಂಜಾನೆ 5ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಸೋಮವಾರದಿಂದ ಶುಕ್ರವಾರ ತನಕ ಕಚೇರಿಗಳು ತೆರೆದಿರುತ್ತವೆ ,ಸಿನಿಮಾ ಮಂದಿರಗಳು ಶೇ. 50ರಷ್ಟು ತೆರೆಯಲು ಅವಕಾಶ ನೀಡಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ 50 ಜನರ ಪ್ರವೇಶಕ್ಕೆ ಅವಕಾಶ ನೀಡಿದ್ದು 2 ಡೋಸ್ ಲಸಿಕೆ ಪಡೆದಿದ್ದಲ್ಲಿ ಮಾತ್ರ ಈ ಅವಕಾಶ ,ಮಾಲ್, ಶಾಪಿಂಗ್ ಮಾಲ್ ಗಳು ವಾರದ ಮಧ್ಯೆ ತೆರೆಯಲು ಅವಕಾಶ ನೀಡಲಾಗಿದೆ.


ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟ ಸರ್ಕಾರ: ಮೇಕೆದಾಟು ಪಾದಯಾತ್ರೆಗೆ ಇದೀಗ ಬ್ರೇಕ್ ಬಿದ್ದಂತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್ ಯಾವುದೇ ಪ್ರತಿಭಟನೆ , ಪಾದಯಾತ್ರೆ ಹಾಗೂ ಸಭೆ ಸಮಾರಂಭಗಳು ನಡೆಸಲು ಅನುಮತಿ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದು ಕಾಂಗ್ರೆಸ್ ನ ಮುಂದಿನ ನಿರ್ಣಯ ಕಾದುನೋಡಬೇಕಾಗಿದೆ.

1 thought on “ಬೆಂಗಳೂರು: ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ

  1. Vaccine ninda covid control agala Andre mathe yenakke vaccine haksokobeku ?? Idu omicron , corona alla , congress Na padayatre tadeyuva prayatna ……

Leave a Reply

Your email address will not be published. Required fields are marked *

error: Content is protected !!