ಮಂಗಳೂರು: ಪಿಲಿಕುಳ ಜೈವಿಕ ಉದ್ಯಾವನದಲ್ಲಿ 9 ವರ್ಷದ ಹುಲಿ ಸಾವು

ಮಂಗಳೂರು(ಉಡುಪಿ ಟೈಮ್ಸ್ ವರದಿ): ಪಿಲಿಕುಳ ಜೈವಿಕ ಉದ್ಯಾನವನದ “ಓಲಿವರ್” ಎಂಬ ಹೆಸರಿನ ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿಯು ಇಂದು ಮುಂಜಾನೆ ಕುಸಿದು ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ
ಓಲಿವರ್ ಹುಲಿಯು ಇಂದು ಮುಂಜಾನೆವರೆಗೆ ಸದೃಢವಾಗಿತ್ತು. ಆದರೆ ಮ್ಮಿಂದೊಮ್ಮೆಲೆ ಕುಸಿದುಬಿದ್ದಿದೆ. ತಕ್ಷಣ ಜೀವ ಉಳಿಸಲು ಮೃಗಾಲಯದ ವೈದ್ಯಧಿಕಾರಿಗಳು ಚಿಕಿತ್ಸೆ ನೀಡಿದರೂ ಜೀವ ಉಳಿಸಲು ಆಗಲಿಲ್ಲ.


ಇನ್ನು ಒಲಿವರ್, ಪಿಲಿಕುಲ ಮೃಗಾಲಯದ ವಿಕ್ರಮ ಹಾಗೂ ಶಾಂಭವಿ ಹೆಸರಿನ ಜೋಡಿ ಹುಲಿಗಳಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದ್ದು, ಪ್ರಸ್ತುತ ಉದ್ಯಾನವನದಲ್ಲಿ 12 ಹುಲಿಗಳಿವೆ. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರು ಹಾಗೂ ಉತ್ತರಪ್ರದೇಶದ ಐವಿಆರ್‌‌ಐಗೆ ಕಳುಹಿಸಲಾಗಿದೆ. ಇನ್ನು ಮೃಗಾಲಯದಲ್ಲಿ ಅನುಮಾನಾಸ್ಪದ ಯಾವುದೇ ರೋಗಗಳು ಹರಡದಂತೆ ರೋಗನಿರೋಧಕ ದ್ರಾವಣಗಳನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತಮುತ್ತ ಸಿಂಪಡಿಸಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್ ಜೆ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!