ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಸಮರ್ಪಣೆ
ಉಡುಪಿ (ಉಡುಪಿ ಟೈಮ್ಸ್ ವರದಿ) ಶ್ರೀ ಅಘೋರೇಶ್ವರ ಕಲಾ ರಂಗ ದ ವತಿಯಿಂದ ನೀಡಲ್ಪಡುವ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಲಿಗ್ರಾಮದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಿನ್ನು ಎ ಸಿ ಯವರಿಗೆ ನೀಡಲಾಯಿತು.
ನವಂಬರ್ 29 ರಂದು ಬೆಳಿಗ್ಗೆ ಪ್ರಗತಿಪರ ಕೃಷಿಕ ಸುಬ್ರಾಯ ಗಾಣಿಗ ಬೆಟ್ಲಕ್ಕಿ ಹಾಗೂ ಉದ್ಯಮಿ ಪ್ರಕಾಶ್ ಮಧ್ಯಸ್ಥ ರವರು ದ್ವಜಾರೋಹಣಗೈದು ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು ಸಂಜೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯವರಾದ ಪಾಂಡೇಶ್ವರ ರಮೇಶ್ ರಾವ್ ರವರು ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಘೋರೇಶ್ವರ ದೇವಸ್ಥಾನದ ಬೃಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ,ಅಘೋರೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಚಂದ್ರ ಶೇಖರ ಕಾರಂತ, ರೋಟರಿ ಕ್ಲಬ್ ಕೋಟ ಸಿಟಿ ಯ ಅಧ್ಯಕ್ಷ ವಿಷ್ಣು ಮೂರ್ತಿ ಉರಾಳ, ಯಕ್ಷ ಸೌರಭ ಕಲಾ ರಂಗ ದ ಉಪಾಧ್ಯಕ್ಷ ಸತ್ಯನಾರಾಯಣ, ಕಲಾರಂಗದ ಅಧ್ಯಕ್ಷ ರಾಘವೇಂದ್ರ ನಾಯರಿ ಯವರು ಉಪಸ್ಠಿತರಿದ್ದರು,ಕಲಾರಂಗದ ಮಾಜಿ ಅಧ್ಯಕ್ಷ ಶಿವಾನಂದ ನಾಯರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಕಲಾರಂಗದ ಸ್ಥಾಪಕ ಅಧ್ಯಕ್ಷ ಉಮೇಶ್ ನಾಯರಿ ಸ್ವಾಗತಿಸಿ, ಕಾರ್ಯದರ್ಶಿ ರಾಧಾಕೃಷ್ಣ ಬ್ರಹ್ಮಾವರ ವಂದಿಸಿದರು.